Friday, December 21, 2012

ಯಾವ ಹಾಡ ಹಾಡಲಿ

Theme -  'Haadu'
Lyrics - G S Shivarudrappa
Music - N S Prasad
Singers - Rathnamala Prakash
 
ಯಾವ ಹಾಡ ಹಾಡಲಿ
ಯಾವ ಹಾಡಿನಿಂದ ನಿಮಗೆ
ನೆಮ್ಮದಿಯನು ನೀಡಲಿ

ಸುತ್ತ ಮುತ್ತ ಮನೆ ಮಠಗಳು
ಹೊತ್ತಿಕೊಂಡು ಉರಿಯುವಲ್ಲಿ
ಸೋತ ಮೂಖವಾದ ಬದುಕು
ನಿಟ್ಟುಸಿರೊಳು ತೇಲುವಲ್ಲಿ

ಬರಿ ಮಾತಿನ ಜಾಲದಲ್ಲಿ
ಶೋಷಣೆಗಳ ಶೂಲದಲ್ಲಿ
ವಂಚನೆಗಳ ಸಂಚಿನಲ್ಲಿ
ಹಸಿದ ಹೊಟ್ಟೆ ನರಳುವಲ್ಲಿ

ಬೆಳಕಿಲ್ಲದ ದಾರಿಯಲ್ಲಿ
ಪಾಳು ಗುಡಿಯ ಸಾಲಿನಲ್ಲಿ
ಬಿರುಗಾಳಿಯ ಬೀಡಿನಲ್ಲಿ
ಕುರುಡು ಪಯಣ ಸಾಗುವಲ್ಲಿ

Wednesday, December 19, 2012

ಎಂದೊ ಕೇಳಿದ ಒಂದು ಹಾಡನು

Theme -  'Haadu'
Lyrics - K S Narasimha Swamy
Music - H Phalguna
Singers - Rameshchandra & M N Srikrupa



ಎಂದೊ ಕೇಳಿದ ಒಂದು ಹಾಡನು
ನಾನು ವೀಣೆಗೆ ಕಲಿಸಿದೆ
ಅದನೆ ನೆನೆಯುತ ನೀನು ಹಾಡಲು
ನಾನು ಜೊತೆಗೂ ನುಡಿಸಿದೆ

ನೀನು ಹಾಡಿದೆ ನಾನು ನುಡಿಸಿದೆ
ಹಾಡೆ ಹಾದಿಯ ತೋರಿತು
ನಿನ್ನ ಕೊರಳಿಗೆ ನನ್ನ ಬೆರಳಿಗೆ
ಸಂಜೆ ಶುಭವನು ಕೋರಿತು

ನೀನು ಹಾಡಿದ ರಾಗದಿಂಪಿಗೆ
ತಳಿರ ತೂಗಿತು ಮಾಮರ
ದೂರ ದೂರಕೆ ಕೂಗಿ ಕೋಗಿಲೆ
ನವಿಲು ಬೀಸಿತು ಚಾಮರ

ಹಾಡು ಮೌನವ ಕಲಕಿ ಹಬ್ಬಿತು
ಮಂದಗಮನದ ಲಯದಲಿ
ಗೆಜ್ಜೆದನಿಗಳು ಕೇಳಿ ಬಂದವು
ಹಚ್ಚಹಸಿರಿನ ಬಯಲಲಿ

ಬಾಳ ನಲಿವೇ ಬಂದು ಹಾಡಿತು
ನಿನ್ನ ಬೆಳ್ಳಿಯ ದನಿಯಲಿ
ಬಣ್ಣ ಬಣ್ಣದ ಬೆಳಕು ಮೂಡಿತು
ಮಣ್ಣ ಹಣತೆಯ ತುಟಿಯಲಿ

ನೀನು ಹಾಡಿದೆ ನಾನು ನುಡಿಸಿದೆ
ಹಾಡು ಕರಗಿತು ಮೆಲ್ಲಗೆ
ಕಂಪ ಸೂಸಿತು ತಂಪು ಗಾಳಿಗೆ
ನಿನ್ನ ಹೆರಳಿನ ಮಲ್ಲಿಗೆ

Tuesday, December 18, 2012

ಶ್ರುತಿ ಮೀರಿದ ಹಾಡು

Theme -  'Haadu'
Lyrics - B R Lakshman Rao
Music - C Ashwath
Singers - C Ashwath & Rathnamala Prakash
Link  - http://www.kannadaaudio.com/Songs/Bhaavageethe/Kengulabi/Shruthi.ram


ಶ್ರುತಿ ಮೀರಿದ ಹಾಡು
ಪ್ರೇಮ ಸುಳಿವ ಜಾಡು


ಅಂದು ಕನಸಿನರಸ
ಇಂದು ಏನೋ ವಿರಸ
ಹಳಸಿತೆ ಆ ಒಲವು
ತಳೆಯಿತೆ ಈ ನಿಲುವು 

ಯಾರಿವಳೀ ಹುಡುಗಿ?
ಹೊಸ ಹರೆಯದ ಬೆಡಗಿ
ಸಾವಿನ ನಾಡಿನೊಳು
ಜೀವರಸದ ಹೊನಲು

ಮಗುವಿನ ನಗೆಯವನು
ಮಿಡಿಯುವ ಬಗೆಯವನು
ಬಾಗಿಲ ಬಡಿಯುವನು
ಇಂದು ಯಾರೊ ಇವನು

ತೆರೆಗಳ ಮೊರೆತದಲಿ
ಆಳದ ಮೌನದಲಿ
ಹೊರಳು ದಾರಿಗಳಲಿ
ನನ್ನ ಮೂಕ ಅಳಲು

Monday, December 17, 2012

ಎದೆತುಂಬಿ ಹಾಡಿದೆನು

Ede tumbi haadidenu andu naana
Rachane - Dr. G S Shivarudrappa
Music Director - Mysore Ananthaswamy
Singer - Mysore Ananthaswamy
 
ಎದೆತುಂಬಿ ಹಾಡಿದೆನು ಅಂದು ನಾನು,
ಮನವಿಟ್ಟು ಕೇಳಿದಿರಿ ಅಲ್ಲಿ ನೀವು

ಇಂದು ನಾ ಹಾಡಿದರು ಅಂದಿನಂತೆಯೆ ಕುಳಿತು 
ಕೇಳುವಿರಿ ಸಾಕೆನಗೆ ಅದುವೆ ಬಹುಮಾನ.
ಹಾಡು ಹಕ್ಕಿಗೆ ಬೇಕೇ ಬಿರುದು ಸನ್ಮಾನ?

ಎಲ್ಲ ಕೇಳಲಿ ಎಂದು ನಾನು ಹಾಡುವುದಿಲ್ಲ
ಹಾಡುವುದು ಅನಿವಾರ್ಯ ಕರ್ಮ ನನಗೆ,
ಕೇಳುವವರಿಹರೆಂದು ನಾ ಬಲ್ಲೆನದರಿಂದ
ಹಾಡುವೆನು ಮೈದುಂಬಿ ಎಂದಿನಂತೆ
ಯಾರು ಕಿವಿ ಮುಚ್ಚಿದರು ನನಗಿಲ್ಲ ಚಿಂತೆ.