Thursday, November 1, 2012

ಮಾನವನಾಗಿ ಹುಟ್ಟಿದ ಮೇಲೆ ಏನೇನ್ ಕಂಡಿ

ಮಾನವನಾಗಿ ಹುಟ್ಟಿದ ಮೇಲೆ ಏನೇನ್ ಕಂಡಿ
ಸಾಹಿತ್ಯ - Mugur Mallappa
ಹಾಡಿರುವವರು - Dr Rajkumar
 
 
 
ಮಾನವನಾಗಿ ಹುಟ್ಟಿದ ಮೇಲೆ ಏನೇನ್ ಕಂಡಿ |
ಸಾಯೋ ತನಕ ಸಂಸಾರದೊಳಗೆ ಗಂಡಾಗುಂಡಿ |
ಹೇರಿಕೊಂಡು ಹೋಗೋದಿಲ್ಲ ಸತ್ತಾಗ್ ಬಂಡಿ|
ಇರೋದರೊಳಗೆ ಒಮ್ಮೆ ನೋಡು ಜೋಗದ ಗುಂಡಿ   || ೧ ||

ತಾಳಗುಪ್ಪಿ ತಾರಕವೆಂಬ ಬೊಂಬಾಯ್ ಮಠ |
ಸಾಲಗುಡ್ಡದ ಮ್ಯಾಲೆ ನೋಟಕ ಭಟ್ಕಳ್ ಮಠ |
ದಾರಿ ಕಡಿದು ಮಾಡಿದರೆ ಗುಡ್ಡ ಬೆಟ್ಟ |
ಪಶ್ಚಿಮ ಘಟ್ಟದ ಮ್ಯಾಲೆ ನೋಡು ಮೈಸೂರ್ ಬಾವುಟ   || ೨ ||

ನಾಡಿನೊಳಗೆ ನಾಡು ಚೆಲುವ ಕನ್ನಡ ನಾಡು |
ಬೆಳ್ಳಿ ಬಂಗಾರ ಬೆಳಿಯುತಾವೆ ಬೆಟ್ಟ ಕಾಡು |
ಭೂಮಿತಾಯಿ ಮುಡಿದು ನಿಂತಾಳ್ ಬಾಸಿಂಗ್ ಜೋಡು |
ಬಾಣಾವತಿ ಬೆಡಗಿನಿಂದ ಬರ್ತಾಳೆ ನೋಡು   || ೩ ||

ಅಂಕು ಡೊಂಕು ವಂಕಿ ಮುರಿ ರಸ್ತೆದಾರಿ |
ಹತ್ತಿ ಇಳಿದು ಸುತ್ತಿದಂಗೆ ಹಾವಿನ ಮರಿ |
ತೊಟ್ಟಿಲ ಜೀಕಿ ಆಡಿದ್ಹಾಂಗೆ ಮನಸಿನ ಲಹರಿ |
ನಡೆಯುತದೆ ಮೈಸೂರೊಳಗೆ ದರಂದುರಿ   || ೪ ||

ಹೆಸರು ಮರ್ತಿ ಶರಾವತಿ ಅದೇನ್ ಕಷ್ಟ |
ಕಡೆದ ಕಲ್ಲ ಕಂಬದ ಮ್ಯಾಲೆ ಪೂಲಿನಕಟ್ಟ |
ಎಷ್ಟು ಮಂದಿ ಎದೆಯ ಮುರಿದು ಪಡುತಾರ್ ಕಷ್ಟ |
ಸಣ್ಣದರಿಂದ ದೊಡ್ಡದಾಗಿ ಕಾಣೋದ್ ಬೆಟ್ಟ   || ೫ ||

ಬುತ್ತಿ ಉಣುತಿದ್ರುಣ್ಣು ಇಲ್ಲಿ ಸೊಂಪಾಗಿದೆ |
ಸೊಂಪು ಇದಪು ಸೇರಿ ಮನಸು ಕಂಪಾಗ್ತದೆ |
ಕಂಪಿನಿಂದ ಜೀವಕ್ಕೊಂದು ತಂಪಾಗ್ತದೆ |
ತಂಪಿನೊಳಗೆ ಮತ್ತೊಂದೇನೋ ಕಾಣಸ್ತದೆ    || ೬ ||

ಅಡ್ಡ ಬದಿ ಒಡ್ಡು ನಲಿಸಿ ನೀರಿನ ಮಿತಿ |
ಇದರ ಒಳಗೆ ಇನ್ನು ಒಂದು ಹುನ್ನಾರೈತಿ |
ನೀರ ಕೆಡವಿ ರಾಟೆ ತಿರುವಿ ಮಿಂಚಿನ ಶಕ್ತಿ |
ನಾಡಿಗೆಲ್ಲ ಕೊಡ್ತಾರಂತೆ ದೀಪದ ತಂತಿ    || ೭ ||

ಊಟ ಮುಗಿದಿದ್ರೇಳು ಮುಂದೆ ನೋಡೋದದೆ |
ನೋಡುತ್ತಿದ್ರೆ ಬುದ್ಧಿ ಕೆಟ್ಟು ಹುಚ್ಚಾಗ್ತದೆ |
ಬೇಕಾದ್ರಲ್ಲಿ ಉಡುಪಿ ಮಾವನ ಮನೆಯೊಂದಿದೆ |
ಉಳಿಯೋದಾದ್ರೆ ಮಹರಾಜ್ರ ಬಂಗ್ಲೆ ಅದೆ  || ೮ ||

ನೋಡು ಗೆಳೆಯ ಜೋಕೆ ಮಾತ್ರ ಪಾತಾಳ ಗುಂಡಿ |
ಹಿಂದಕೆ ಸರಿದು ನಿಲ್ಲು ತುಸು ಕೈತಪ್ಪಿಕೊಂಡಿ |
ಕೈಗಳಳ್ತಿ ಕಾಣಸ್ತದೆ ಬೊಂಬಾಯ್ ದಂಡೀ |
ನಮ್ಮದಂದ್ರೆ ಹೆಮ್ಮೆಯಲ್ಲ ಜೋಗದ ಗುಂಡೀ  || ೯ ||

ಶಿಸ್ತುಗಾರ ಶಿವಪ್ಪನಾಯ್ಕ ಕೆಳದಿಯ ನಗರ |
ಚಿಕ್ಕದೇವ ದೊಡ್ಡದೇವ ಮೈಸೂರಿನವರ |
ಹಿಂದಕ್ಕಿಲ್ಲಿ ಬಂದಿದ್ರಂತೆ ಶ್ರೀರಾಮರ |
ಎಲ್ಲ ಕಥೆ ಹೇಳುತದೆ ಕಲ್ಪಾಂತರ   || ೧೦ ||

ರಾಜ ರಾಕೆಟ್ ರೋರರ್ ಲೇಡಿ ಚತುರ್ಮುಖ |
ಜೋಡಿಗೂಡಿ ಹಾಡಿತಾವೆ ಹಿಂದಿನ ಸುಖ |
ತಾನು ಬಿದ್ರೆ ಆದೀತೆಳು ತಾಯಿಗೆ ಬೆಳಕ |
ಮುಂದಿನವರು ಕಂಡರೆ ಸಾಕು ಸ್ವಂತ ಸುಖ   || ೧೧ ||

ಒಂದು ಎರಡು ಮೂರು ನಾಲ್ಕು ಆದಾವ್ ಮತ |
ಹಿಂದಿನಿಂದ ಹರಿದು ಬಂದದ್ದೊಂದೇ ಮತ |
ಗುಂಡಿ ಬಿದ್ದು ಹಾಳಾಗಲಿಕ್ಕೆ ಸಾವಿರ ಮತ |
ಮುಂದೆ ಹೋಗಿ ಸೇರುವಲ್ಲಿಗೊಂದೇ ಮತ    || ೧೨ ||

ಷಹಜಹಾನ ತಾಜಮಹಲು ಕೊಹಿನೂರ್ ಮಣಿ |
ಸಾವಿರಿದ್ರು ಸಲ್ಲವಿದಕೆ ಚೆಲುವಿನ ಕಣಿ |
ಜೀವವಂತ ಶರಾವತಿಗಿನ್ನಾವ್ದೆಣಿ |
ಹೊಟ್ಟೆಕಿಚ್ಚಿಗಾಡಿಕೊಂಡ್ರೆ ಅದಕಾರ್ ಹೊಣೆ   || ೧೩ ||

ಶರಾವತೀ ಕನ್ನಡ ನಾಡ ಭಾಗೀರಥಿ |
ಪುಣ್ಯವಂತ್ರು ಬರ್ತಾರಿಲ್ಲಿ ದಿನಂಪ್ರತೀ |
ಸಾವು ನೋವು ಸುಳಿಯದಿಲ್ಲಿಯ ಕರಾಮತಿ |
ಮಲ್ಲೇಶನ ನೆನೆಯುತಿದ್ರೆ ಜೀವನ್ಮುಕ್ತಿ   || ೧೪ ||

Wednesday, October 31, 2012

ಬಾರಿಸು ಕನ್ನಡ ಡಿಂಡಿಮವ

ಬಾರಿಸು ಕನ್ನಡ ಡಿಂಡಿಮವಸಾಹಿತ್ಯ - Kuvempu

ರಾಗ ಸಂಯೋಜನೆ - Mysore Ananthaswamy
ಹಾಡಿರುವವರು - Puttur Narasimha Nayak
 

ಬಾರಿಸು ಕನ್ನಡ ಡಿಂಡಿಮವ
ಓ ಕರ್ನಾಟಕ ಹೃದಯ ಶಿವ

ಸತ್ತಂತಿಹರನು ಬಡಿದೆಚ್ಚರಿಸು
ಕಚ್ಚಾಡುವರನು ಕೂಡಿಸಿ ಒಲಿಸು
ಹೊಟ್ಟೆಯ ಕಿಚ್ಚಿಗೆ ಕಣ್ಣೀರ್ ಸುರಿಸು
ಒಟ್ಟಿಗೆ ಬಾಳುವ ತೆರದಲಿ ಹರಸು

ಕ್ಷಯಿಸೆ ಶಿವೇತರ ಕೃತಿ ಕೃತಿಯಲ್ಲಿ
ಮೂಡಲಿ ಮಂಗಳ ಮತಿ ಮತಿಯಲ್ಲಿ
ಕವಿ ಋಷಿ ಸಂತರ ಆದರ್ಶದಲಿ
ಸರ್ವೋದಯವಾಗಲಿ ಸರ್ವರಲಿ

Tuesday, October 30, 2012

ಸುಮಸುಂದರ ತರುಲತೆಗಳ ಬೃಂದಾವನ ಲೀಲೆ

ಸುಮಸುಂದರ ತರುಲತೆಗಳ ಬೃಂದಾವನ ಲೀಲೆ
ಸಾಹಿತ್ಯ - Sa Shi Marulayya

A song we sang at school for most of the Rajyotsava celeberations, but unfortunately I cannot find a audio link for this song.



ಸುಮಸುಂದರ ತರುಲತೆಗಳ ಬೃಂದಾವನ ಲೀಲೆ
ಸುಪ್ರಭೋಧ ಚಂದ್ರೋದಯ ರಾಗಾರುಣ ಜ್ವಾಲೆ
ಗಿರಿ ಸಿರಿ ಬನ ಸಂಚಾರಿಣಿ ತುಂಗಾಜಲ ಧಾರೆ
ಧಲ ಧಲ ಧಲ ಮೆದು ಹಾಸಲಿ ಗಾನ ಸುಪ್ತಲೋಲೆ ||

ಮಲೆನಾಡಿನ ಕೋಗಿಲೆಯೇ ಬಯಲನಾಡ ಮಲ್ಲಿಗೆಯೇ
ವಂಗ ವಿಷಯ ಭೃಂಗವೆ ಧವಳಗಿರಿಯ ಶೃ೦ಗವೆ
ಕಾವೇರಿ... ಗೋದಾವರಿ... ಗಂಗೆ ಯಮುನೆ ಸಿಂಧುವೆ ||

ಶತ ಶತ ಶತಮಾನಗಳ ಗುಪ್ತಗಾಮಿ ಚೇತನವೇ
ಋತು ಋತುವಿಗೂ ಹೂವಾಗಿ ಫಲವಾಗುವ ತನಿರಸವೇ
ಚಿಲಿಪಿಲಿಯಂಥಾಮೋದದಿ  ನಲಿದುಲಿವ ಕೂಜನವೇ
ಮಧುರ ಮಂದಾನಿಲ ಸೌಗಂಧದ ಸಿರಿ ಪರಿಮಳವೇ ||

ನಸು ಹಸುರಿನ ಹಿಮಮಣಿಯೇ
ಎಳೆ ಬಿಸಿಲಿನ ಮೆಲುದನಿಯೇ
ಬಿರಿದ ಮುಗಿಲ ಬಿಂಕವೇ
ತೆರೆದ ಸೋಗೆ ನರ್ತನವೇ

Monday, October 29, 2012

ಸ್ಥವಿರ ಗಿರಿಯ ಚಲನದಾಸೆ

ಸ್ಥವಿರ ಗಿರಿಯ ಚಲನದಾಸೆ

ಸಾಹಿತ್ಯ - Pu Ti Na
ರಾಗ ಸಂಯೋಜನೆ - C Ashwath
ಹಾಡಿರುವವರು - Divya Raghavan, Mangala Ravi
 
 
 
ಸ್ಥವಿರ ಗಿರಿಯ ಚಲನದಾಸೆ ಮೂಕವನದ ಗೀತದಾಸೆ
ಸೃಷ್ಟಿ ಹೊರೆಯ ಹೊತ್ತ ತಿರೆಯ ನಗುವಿನಾಸೆ ನಾ
ಬಾಳ್ವೆಗೆಲ್ಲ ನಾನೆ ನೆಚ್ಚು ಲೋಕಕೆಲ್ಲ ಅಚ್ಚು ಮೆಚ್ಚು
ನಾನೆ ನಾನೆ ವಿಧಿಯ ಹುಚ್ಚು ಹೊನಲ ರಾಣಿ ನಾ

ಕಿರಣ ನೇಯ್ದ ಸರಿಗೆಯುಡಿಗೆ ಇರುಳು ಕೊಟ್ಟ ತಾರೆ ತೊಡಿಗೆ
ಇಂದು ಕಳೆಯ ಹೂವೆ ಮುಡಿಗೆ ದೇವಕನ್ಯೆ ನಾ
ಬೆಳ್ಳಿ ನೊರೆಯ ನಗೆ ನಗುತ್ತ ತೆರೆಯ ನಿರಿಯ ಚಿಮುಕಿಸುತ್ತ
ಕಡಲ ವರಿಸೆ ತವಕಿಸುತ್ತ ನಡೆವ ವಧುವೆ ನಾ

ಲಲಿತ ಕುಣಿತವೆನ್ನ ಶೀಲ ಚಲನವೆನ್ನ ಜೀವಾಳ
ಲುಪ್ತಮಾಗೆ ದೇಶ ಕಾಲ ಎನ್ನ ಗಾಯನ
ದಡದ ಗಿಡಕೆ ಪುಷ್ಪಹಾಸ ಸನಿಹ ದಿಳೆಗೆ ಸಸ್ಯಹಾಸ
ಹಾಸಕೀರ್ಣ ಹಾಸಪೂರ್ಣ ಎನ್ನ ಜೀವನ

ನಾನು ನಿಲ್ವುದೊಂದೆ ಚಣಮ್ ಸತತ ಕರ್ಮವೆನ್ನ ಗುಣಮ್
ಅದಕೆ ಕಾಣೆ ಗೋಡ ನಡಮ್ ಹರ್ಷಮ್ ಎನಗೆ ಚಿರಂತನಮ್
ಗವಿಗಳಲ್ಲಿ ಹುಳ್ಳನಡಗಿ ಬಂಡೆ ಮೇಲೆ ಹೂವ ನೆರಗಿ
ಮಡುವೆನಿಂದ ಮೆಲ್ಲನೆ ಜರುಗಿ ಕಡಲಿಗೋಡುವೆ

ಅಜರ ಜಗದ ಚಲನದಾಸೆ ಮೂಕ ಜಗದ ಗೀತದಾಸೆ
ನಿಯತಿ ನಿಯಮ ನಿಯತ ಜಗದ ನಗುವಿನಾಸೆ ನಾ
ವನ ವಿನೋದ ಮಲೆ ಅಮೋದ ಮುಗಿಲ ಮೇಲ್ಮೆ ನಾಡ ನಲ್ಮೆ
ನಾನೆ ನಾನೆ ವಿವದ ಒಲುಮೆ ಹೊನಲ ರಾಣಿ ನಾ