Friday, October 12, 2012

ಭಾಗ್ಯಾದ ಬಳೆಗಾರ ಹೋಗಿಬಾ ನನ್ ತವರಿಗೆ

Theme of the week - ತವರಿನ ಹಾಡುಗಳು
Genre - Folk song
Haadu - Bhagyada balegara
An eternal favorite of mine, I can never get tired of listening to this song.

http://www.kannadaaudio.com/Songs/Folk/BhagyadaBalegara/BhagyadaBalegara.ram
 
 
ಭಾಗ್ಯಾದ ಬಳೆಗಾರ ಹೋಗಿಬಾ ನನ್ ತವರಿಗೆ
ನಿನ್ನ ತವರೂರ ನಾನೇನು ಬಲ್ಲೆನು
ಗೊತ್ತಿಲ್ಲ ಎನಗೆ ಗುರಿ ಇಲ್ಲ ಎಲೆಬಾಲೆ
ತೋರಿಸು ಬಾರೆ ತವರೂರ

...
ಬಾಳೆ ಬಲಕ್ಕೆ ಬೀಡು, ಸೀಬೆ ಎಡಕ್ಕೆ ಬೀಡು
ನಟ್ಟ ನಡುವೇಲಿ ನೀ ಹೋಗು ಬಳೆಗಾರ
ಅಲ್ಲಿಹುದೆನ್ನ ತವರೂರು
ಮುತ್ತೈದೆ ಎಲೆ ಹೆಣ್ಣೆ ತೋರು ಬಾ ನಿನ್ ತವರೂರ

ಹಂಚಿನ ಮನೆ ಕಾಣೊ ಕಂಚಿನ ಕದ ಕಾಣೊ
ಇಂಚಾಡೊವೆರಡು ಗಿಳಿ ಕಾಣೊ ಬಳೆಗಾರ
ಅಲ್ಲಿಹುದೆನ್ನ ತವರೂರು
ಮುತ್ತೈದೆ ಎಲೆ ಹೆಣ್ಣೆ ತೋರು ಬಾರೆ ತವರೂರ

ಆಲೆ ಆಡುತ್ತಾವೆ ಗಾಣ ತಿರುಗುತ್ತಾವೆ
ನವಿಲು ಸಾರಂಗ ನಲಿದಾವೆ ಬಳೆಗಾರ
ಅಲ್ಲಿಹುದೆನ್ನ ತವರೂರು
ಮುತ್ತೈದೆ ಎಲೆ ಹೆಣ್ಣೆ ತೋರು ಬಾ ನಿನ್ ತವರೂರ

ಮುತ್ತೈದೆ ಹಟ್ಟೀಲಿ ಮುತ್ತಿನ ಚಪ್ರ ಹಾಕಿ
ನಟ್ಟ ನಡುವೇಲಿ ಪಗಡೆಯ ಆಡುತಾಳೆ
ಅವಳೆ ಕಣೊ ನನ್ನ ಹಡೆದವ್ವ
ಮುತ್ತೈದೆ ಎಲೆ ಹೆಣ್ಣೆ ತೋರು ಬಾರೆ ತವರೂರ

ಆಚ್ಚ ಕೆಂಪಿನ ಬಳೆ ಹಸಿರು ಗೀರಿನ ಬಳೆ
ನನ್ನ ಹಡೆದವ್ಗೆ ಬಲು ಆಸೆ ಬಳೆಗಾರ
ಕೊಂಡ್ ಹೋಗು ಎನ್ನ ತವರೀಗೆ
ಭಾಗ್ಯಾದ ಬಳೆಗಾರ ಹೋಗಿಬಾ ನನ್ ತವರಿಗೆ