Friday, December 21, 2012

ಯಾವ ಹಾಡ ಹಾಡಲಿ

Theme -  'Haadu'
Lyrics - G S Shivarudrappa
Music - N S Prasad
Singers - Rathnamala Prakash
 
ಯಾವ ಹಾಡ ಹಾಡಲಿ
ಯಾವ ಹಾಡಿನಿಂದ ನಿಮಗೆ
ನೆಮ್ಮದಿಯನು ನೀಡಲಿ

ಸುತ್ತ ಮುತ್ತ ಮನೆ ಮಠಗಳು
ಹೊತ್ತಿಕೊಂಡು ಉರಿಯುವಲ್ಲಿ
ಸೋತ ಮೂಖವಾದ ಬದುಕು
ನಿಟ್ಟುಸಿರೊಳು ತೇಲುವಲ್ಲಿ

ಬರಿ ಮಾತಿನ ಜಾಲದಲ್ಲಿ
ಶೋಷಣೆಗಳ ಶೂಲದಲ್ಲಿ
ವಂಚನೆಗಳ ಸಂಚಿನಲ್ಲಿ
ಹಸಿದ ಹೊಟ್ಟೆ ನರಳುವಲ್ಲಿ

ಬೆಳಕಿಲ್ಲದ ದಾರಿಯಲ್ಲಿ
ಪಾಳು ಗುಡಿಯ ಸಾಲಿನಲ್ಲಿ
ಬಿರುಗಾಳಿಯ ಬೀಡಿನಲ್ಲಿ
ಕುರುಡು ಪಯಣ ಸಾಗುವಲ್ಲಿ

Wednesday, December 19, 2012

ಎಂದೊ ಕೇಳಿದ ಒಂದು ಹಾಡನು

Theme -  'Haadu'
Lyrics - K S Narasimha Swamy
Music - H Phalguna
Singers - Rameshchandra & M N Srikrupa



ಎಂದೊ ಕೇಳಿದ ಒಂದು ಹಾಡನು
ನಾನು ವೀಣೆಗೆ ಕಲಿಸಿದೆ
ಅದನೆ ನೆನೆಯುತ ನೀನು ಹಾಡಲು
ನಾನು ಜೊತೆಗೂ ನುಡಿಸಿದೆ

ನೀನು ಹಾಡಿದೆ ನಾನು ನುಡಿಸಿದೆ
ಹಾಡೆ ಹಾದಿಯ ತೋರಿತು
ನಿನ್ನ ಕೊರಳಿಗೆ ನನ್ನ ಬೆರಳಿಗೆ
ಸಂಜೆ ಶುಭವನು ಕೋರಿತು

ನೀನು ಹಾಡಿದ ರಾಗದಿಂಪಿಗೆ
ತಳಿರ ತೂಗಿತು ಮಾಮರ
ದೂರ ದೂರಕೆ ಕೂಗಿ ಕೋಗಿಲೆ
ನವಿಲು ಬೀಸಿತು ಚಾಮರ

ಹಾಡು ಮೌನವ ಕಲಕಿ ಹಬ್ಬಿತು
ಮಂದಗಮನದ ಲಯದಲಿ
ಗೆಜ್ಜೆದನಿಗಳು ಕೇಳಿ ಬಂದವು
ಹಚ್ಚಹಸಿರಿನ ಬಯಲಲಿ

ಬಾಳ ನಲಿವೇ ಬಂದು ಹಾಡಿತು
ನಿನ್ನ ಬೆಳ್ಳಿಯ ದನಿಯಲಿ
ಬಣ್ಣ ಬಣ್ಣದ ಬೆಳಕು ಮೂಡಿತು
ಮಣ್ಣ ಹಣತೆಯ ತುಟಿಯಲಿ

ನೀನು ಹಾಡಿದೆ ನಾನು ನುಡಿಸಿದೆ
ಹಾಡು ಕರಗಿತು ಮೆಲ್ಲಗೆ
ಕಂಪ ಸೂಸಿತು ತಂಪು ಗಾಳಿಗೆ
ನಿನ್ನ ಹೆರಳಿನ ಮಲ್ಲಿಗೆ

Tuesday, December 18, 2012

ಶ್ರುತಿ ಮೀರಿದ ಹಾಡು

Theme -  'Haadu'
Lyrics - B R Lakshman Rao
Music - C Ashwath
Singers - C Ashwath & Rathnamala Prakash
Link  - http://www.kannadaaudio.com/Songs/Bhaavageethe/Kengulabi/Shruthi.ram


ಶ್ರುತಿ ಮೀರಿದ ಹಾಡು
ಪ್ರೇಮ ಸುಳಿವ ಜಾಡು


ಅಂದು ಕನಸಿನರಸ
ಇಂದು ಏನೋ ವಿರಸ
ಹಳಸಿತೆ ಆ ಒಲವು
ತಳೆಯಿತೆ ಈ ನಿಲುವು 

ಯಾರಿವಳೀ ಹುಡುಗಿ?
ಹೊಸ ಹರೆಯದ ಬೆಡಗಿ
ಸಾವಿನ ನಾಡಿನೊಳು
ಜೀವರಸದ ಹೊನಲು

ಮಗುವಿನ ನಗೆಯವನು
ಮಿಡಿಯುವ ಬಗೆಯವನು
ಬಾಗಿಲ ಬಡಿಯುವನು
ಇಂದು ಯಾರೊ ಇವನು

ತೆರೆಗಳ ಮೊರೆತದಲಿ
ಆಳದ ಮೌನದಲಿ
ಹೊರಳು ದಾರಿಗಳಲಿ
ನನ್ನ ಮೂಕ ಅಳಲು

Monday, December 17, 2012

ಎದೆತುಂಬಿ ಹಾಡಿದೆನು

Ede tumbi haadidenu andu naana
Rachane - Dr. G S Shivarudrappa
Music Director - Mysore Ananthaswamy
Singer - Mysore Ananthaswamy
 
ಎದೆತುಂಬಿ ಹಾಡಿದೆನು ಅಂದು ನಾನು,
ಮನವಿಟ್ಟು ಕೇಳಿದಿರಿ ಅಲ್ಲಿ ನೀವು

ಇಂದು ನಾ ಹಾಡಿದರು ಅಂದಿನಂತೆಯೆ ಕುಳಿತು 
ಕೇಳುವಿರಿ ಸಾಕೆನಗೆ ಅದುವೆ ಬಹುಮಾನ.
ಹಾಡು ಹಕ್ಕಿಗೆ ಬೇಕೇ ಬಿರುದು ಸನ್ಮಾನ?

ಎಲ್ಲ ಕೇಳಲಿ ಎಂದು ನಾನು ಹಾಡುವುದಿಲ್ಲ
ಹಾಡುವುದು ಅನಿವಾರ್ಯ ಕರ್ಮ ನನಗೆ,
ಕೇಳುವವರಿಹರೆಂದು ನಾ ಬಲ್ಲೆನದರಿಂದ
ಹಾಡುವೆನು ಮೈದುಂಬಿ ಎಂದಿನಂತೆ
ಯಾರು ಕಿವಿ ಮುಚ್ಚಿದರು ನನಗಿಲ್ಲ ಚಿಂತೆ.

Thursday, December 13, 2012

ಎಲ್ಲಾನು ಬಲ್ಲೆನೆಂಬುವಿರಲ್ಲ

Song - ಎಲ್ಲಾನು ಬಲ್ಲೆನೆಂಬುವಿರಲ್ಲ
Genre - BhaktiGeete
Lyrics - Purandaradaasa

ಎಲ್ಲಾನು ಬಲ್ಲೆನೆಂಬುವಿರಲ್ಲ ಅವಗುಣ ಬಿಡಲಿಲ್ಲ
ಸೊಲ್ಲಿಗೆ ಶರಣರ ಕಥೆಗಳ ಪೇಳುತ
ಅಲ್ಲದ ನುಡಿಯನ್ನು ನುಡಿಯುವಿರಲ್ಲ

ಕಾವಿಯನುಟ್ಟು ತಿರಗುವಿರಲ್ಲ ಕಾಮವ ಬಿಡಲಿಲ್ಲ
ನೇಮ ನಿಷ್ಠೆಗಳ ಮಾಡುವಿರಲ್ಲ ತಾಮಸ ಬಿಡಲಿಲ್ಲ
ತಾವೊಂದರಿಯದೆ ಪರರನು ತಿಳಿಯದೆ ಶ್ವಾನನ ಕುಳಿಯಲಿ ಬೀಳುವಿರಲ್ಲ

ಗುರುಗಳ ಸೇವೆ ಮಾಡಿದಿರಲ್ಲ ಗುರುತಾಗಲಿಲ್ಲ
ಪರಿಪರಿ ದೇಶವ ತಿರುಗಿದಿರಲ್ಲ ಪೊರೆಯುವರಿನ್ನಿಲ್ಲ
ಅರಿವೊಂದರಿಯದೆ ಆಗಮ ತಿಳಿಯದೆ ನರಕ ಕೂಪದಲಿ ಬೀಳುವಿರಲ್ಲ

ಬ್ರಹ್ಮಜ್ಞಾನಿಗಳು ಎನಿಸುವಿರಲ್ಲ ಹಮ್ಮು ಬಿಡಲಿಲ್ಲ
ಸುಮ್ಮನೆ ಯಾಗವ ಮಾಡುವಿರಲ್ಲ ಸುಳ್ಳನು ಬಿಡಲಿಲ್ಲ
ಗಮ್ಮನೆ ಪುರಂದರ ವಿಠಲನ ಪಾದಕೆ ಹೆಮ್ಮೆ ಬಿಟ್ಟು ನೀವೆರಗಲೆ ಇಲ್ಲ

Wednesday, December 12, 2012

ನಾ ಮೇಲಿನವನು ಬಲು ದೊಡ್ಡವನು

This week brings a mixed bag of bhavageethe, janapada geethe, chitra geethe and a DasaraPada - all conveying the same message.

Song - ನಾ ಮೇಲಿನವನು ಬಲು ದೊಡ್ಡವನು
Lyrics - B T Lalitha Nayak
Genre - BhavaGeethe
Singer - Yeshavantha Halebandi
Music - C Ashwath
Link - http://www.kannadaaudio.com/Songs/Bhaavageethe/BhaavaDeepti/Naa.ram

ನಾ ಮೇಲಿನವನು ಬಲು ದೊಡ್ಡವನು ಎಂದು,
ಮೆರೆದಾಡ ಬೇಡ ಗೆಳೆಯ.
ನಿನಗಿಂತ ಮಿಗಿಲವರು ಇದ್ದಾರೂ ಬುವಿಯಲ್ಲಿ,
ಸುಳ್ಳು ಭ್ರಮೆಯಲ್ಲಿ ನೀ ಮುಳುಗಬೇಡ.

ಬಲುದೊಡ್ಡ ಚಂದಿರನು ಇರುಳೆಲ್ಲ ಬೆಳಗುವನು
ಮರೆಯಾಗುವನು ಹಗಲ ಕಿರಣದಲ್ಲಿ.
ಉರಿಯುವನು ಸೂರ್ಯ ಅವನಿಗಿಂತ ಹಿರಿಯ
ಕಳೆದು ಹೋಗುವನು ಇರುಳ ಸೆರಗಿನಲ್ಲಿ.

ಗ್ರಹತಾರೆಗಳ ಹೊತ್ತ ಗಗನಕೆ ಮರೆಯುಂಟೆ
ಸಾರಿ ಹೇಳಿತೆ ತಾ ಮಿಗಿಲು ಎಂದು.
ಅಣುವಲ್ಲಿ ಅಣುವಾದ ಕಣ್ಣಿದ್ದೂ ಕುರುಡಾದ
ನೀ ಕೂಗಬಹುದು ಹಾಗೆಂದು.

ಮಣ್ಣು ಮೊಳಕೆಯ ಹುಟ್ಟು ಬೀಜವೃಕ್ಷದ ಗುಟ್ಟು
ಬೆರಗುಗೊಳಿಸುವುದಿಲ್ಲವೇನು
ಗಿರಿ ಝರಿಯ ಒರತೆ ಜೀವರಾಶಿಯ ಚರಿತೆ
ರೋಮಾಂಚನಗೊಳಿಸದೇನು.

ಜನನ ಮರಣದ ಒಗಟ ಬಿಚ್ಚಿ ಹೇಳುವೆಯೇನು
ಲೋಕದೊಳಿತಿಗೆ ನಿನ್ನ ಕಾಣಿಕೆ ಏನು?
ಹೇಳು ಗೆಳೆಯನೆ ಈಗ ಎದೆ ತಟ್ಟಿ ನೀ ಹೇಳು
ಪ್ರಕೃತಿಯ ಹಿರಿತನಕೆ ನೀ ಸಾಟಿಯೇನು??

Tuesday, December 11, 2012

ಹೂವು ಚೆಲುವೆಲ್ಲ ನಂದೆಂತಿತು

This week brings a mixed bag of bhavageethe, janapada geethe, chitra geethe and a DasaraPada - all conveying the same meaning.
Song - ಹೂವು ಚೆಲುವೆಲ್ಲ ನಂದೆಂತಿತು
Lyrics - R N Jayagopal
Genre - ChitraGeethe
Link - http://www.kannadaaudio.com/Songs/Compilations/Viraha-Nooru-Tharaha-Susheela-Hits/Hoovu-Cheluvella.ram

ಹೂವು ಚೆಲುವೆಲ್ಲ ನಂದೆಂತಿತು
ಹೆಣ್ಣು ಹೂವ ಮುಡಿದು ಚೆಲುವೇ ತಾನೆಂದಿತು

ಕೋಗಿಲೆಯು ಗಾನದಲ್ಲಿ ನಾನೇ ದೊರೆಯೆಂದಿತು
ಕೊಳಲಿನ ದನಿ ವೀಣೆಯ ಖನಿ ಕೊರಳಲಿ ಇದೆಯೆಂತು
ಹೆಣ್ಣು ವೀಣೆ ಹಿಡಿದ ಶಾರದೆಯೆ ಹೆಣ್ಣೆಂದಿತು

ನವಿಲೊಂದು ನಾಟ್ಯದಲ್ಲಿ ತಾನೇ ಮೊದಲೆಂದಿತು
ಕೆದರುತ ಗರಿ ಕುಣಿಯುವ ಪರಿ ಕಣ್ಣಿಗೆ ಸೊಂಪೆಂತು
ಹೆಣ್ಣು ನಾಟ್ಯದರಸಿ ಪಾರ್ವತಿಯೆ ಹೆಣ್ಣೆಂದಿತು

ಮುಗಿಲೊಂದು ಬಾನಿನಲ್ಲಿ ತಾನೇ ಮಿಗಿಲೆಂದಿತು
ನೀಡುವೆ ಮಳೆ ತೊಳೆಯುವೆ ಕೊಳೆ ಸಮನಾರೆನಗೆಂತು
ಹೆಣ್ಣು ಪಾಪ ತೊಳೆವ ಸುರಗಂಗೆ ಹೆಣ್ಣೆಂದಿತು
 
 

Monday, December 10, 2012

ಚೆಲ್ವಿ ಚೆಲ್ವಿ ಎಂದು ಅತಿ ಆಸೆ ಪಡಬ್ಯಾಡ

This week brings a mixed bag of bhavageethe, janapada geethe, chitra geethe and a DasaraPada - all conveying the same meaning.

Song - ಚೆಲ್ವಿ ಚೆಲ್ವಿ ಎಂದು ಅತಿ ಆಸೆ ಪಡಬ್ಯಾಡ
Genre - Janapada Geethe
Singer - Jayashri Aravind
Link  - http://www.kannadaaudio.com/Songs/Folk/AadonaBanni/ChelviChelvi.ram


ಚೆಲ್ವಿ ಚೆಲ್ವಿ ಎಂದು ಅತಿ ಆಸೆ ಪಡಬ್ಯಾಡ
ಚೆಲುವಿದ್ದರೇನು ಗುಣವಿಲ್ಲ
ಚೆಲುವಿದ್ದರೇನು ಗುಣವಿಲ್ಲ ಕೊಳೆನೀರು
ತಿಳಿಯಿದ್ದರೇನೂ ರುಚಿ ಇಲ್ಲ

ಕಪ್ಪು ಹೆಂಡತಿಯೆಂದು ಕಳವಳ ಪಡಬ್ಯಾಡ
ನೇರಳೆ ಹಣ್ಣು ಬಲು ಕಪ್ಪು
ನೇರಳೆ ಹಣ್ಣು ಬಲು ಕಪ್ಪು ಆದರು
ತಿಂದು ನೋಡಿದರೆ ರುಚಿ ಬಹಳ

ಕೆಂಪು ಹೆಂಡತಿಯೆಂದು ಸಂತೋಷ ಪಡಬ್ಯಾಡ
ಅತ್ತಿಯ ಹಣ್ಣು ಬಲು ಕೆಂಪು
ಅತ್ತಿಯ ಹಣ್ಣು ಬಲು ಕೆಂಪು ಇದ್ದರು
ಒಡೆದು ನೋಡಿದರೇ ಹುಳು ಬಹಳ

ಬಂಗಾರ ಬಳೆ ತೊಟ್ಟು ಬಡವರ ಬೈಬ್ಯಾಡ
ಬಂಗಾರ ನಿನಗೆ ಸ್ಥಿರವಲ್ಲ
ಬಂಗಾರ ನಿನಗೆ ಸ್ಥಿರವಲ್ಲ ಮಧ್ಯಾನ
ಸಂಜೆಯಾಗುವುದು ತಡವಲ್ಲ
 

Friday, December 7, 2012

ಪಡುವಣ ದಿಕ್ಕಿನ ಮೋಡದ ಮೇಲೆ

Song - ಪಡುವಣ ದಿಕ್ಕಿನ ಮೋಡದ ಮೇಲೆ
Lyrics - K S NarasimhaSwamy
Music - B K Seetharama Rao
Singer - Kishore Duth
Album - Nava Pallava
Link - http://www.kannadaaudio.com/Songs/Bhaavageethe/Navaoallava/Paduvana.ram


ಪಡುವಣ ದಿಕ್ಕಿನ ಮೋಡದ ಮೇಲೆ
ಇರುವುದು ನಮ್ಮಯ ಊರೊಂದು
ಸಿಡಿಲಿನ ಮಿಂಚಿನ ಗುಡುಗಿನ ಊರು
ಅದರಂತಿರುವುದೆ ಬೇರೊಂದು?

ಬನಗಳ ಗಿಡಗಳ ಕೊಂಬೆಯ ಮೇಲೆ
ಕೋಗಿಲೆ ಗಾನವ ಪಾಡುವುದು
ಗಾನದ ಇಂಪಿನ ಮೋಡದ ಮೇಲೆ
ರಸಿಕರನೇರಿಸುತೊಯ್ಯುವುದು

ಕೊಳಗಳ ದಡಗಳ ಕುಂಜಗಳಲ್ಲಿ
ಕೊಳಲನ್ನೂದುವ ಕಬ್ಬಿಗರು
ಹೂವನು ಚುಂಬಿಸಿ ಹೃದಯಕೆ ಒತ್ತುತ
ಇನಿಯಳ ನೆನೆಯುವ ಕಬ್ಬಿಗರು

ಸಂಜೆಯ ರಾಗದಿ ಕಾಂಬರು ಕವಿಗಳು
ದೇವನ ಸೃಷ್ಟಿಯ ಸೊಬಗೊಂದ
ಕಬ್ಬಿಗ ತನ್ನಯ ಕವನವ ಹಾಡಲು
ಜಗದಲಿ ಮೂಡುವುದಾನಂದ
 

Thursday, December 6, 2012

ಹಕ್ಕಿಯ ಹಾಡಿಗೆ

Song - ಹಕ್ಕಿಯ ಹಾಡಿಗೆ
Album - Iruvantige
Lyrics - K S NarasimhaSwamy
Singer - Shimogga Subbanna & Rathnamala Prakash
 
ಹಕ್ಕಿಯ ಹಾಡಿಗೆ ತಲೆದೂಗುವ ಹೂ ನಾನಾಗುವ ಆಸೆ
ಹಸುವಿನ ಕೊರಳಿನ ಗೆಜ್ಜೆಯ ದನಿಯು ನಾನಾಗುವ ಆಸೆ

ಹಬ್ಬಿದ ಕಾಮನ ಬಿಲ್ಲಿನ ಮೇಲಿನ ಮುಗಿಲಾಗುವ ಆಸೆ
ಚಿನ್ನದ ಬಣ್ಣದ ಜಿಂಕೆಯ ಕಣ್ಣಿನ ಮಿಂಚಾಗುವ ಆಸೆ

ತೋಟದ ಕಂಪಿನ ಉಸಿರಲಿ ತೇಲುವ ಜೇನಾಗುವ ಆಸೆ
ಕಡಲಿನ ನೀಲಿಯ ನೀರಲಿ ಬಳುಕುವ ಮೀನಾಗುವ ಆಸೆ

ಸಿಡಿಲನು ಕಾರುವ ಬಿರುಮಳೆಗಂಜದೆ ಮುನ್ನಡೆಯುವ ಆಸೆ
ನಾಳೆಯ ಬದುಕಿನ ಇರುಳಿನ ತಿರುವಿಗೆ ದೀಪವನಿಡುವಾಸೆ

ಮಣ್ಣಿನ ಕೊಡುಗೆಗೆ ನೋವಿಗೆ ನಲಿವಿಗೆ ಕನ್ನಡಿ ಹಿಡಿವಾಸೆ
ಮಾನವ ಹೃದಯದ ಕರುಣೆಗೆ ಒಲವಿಗೆ ದನಿಗೂಡಿಸುವಾಸೆ

Wednesday, December 5, 2012

ಗಿರಿಯ ಶಿರದ ಮೇಲೆ

Song - ಗಿರಿಯ ಶಿರದ ಮೇಲೆ ಸರಿವ
Album - Iruvantige
Lyrics - K S NarasimhaSwamy
Singer - Rathnamala Prakash

ಗಿರಿಯ ಶಿರದ ಮೇಲೆ ಸರಿವ
ಬಿಳಿಯ ಮುಗಿಲ ಸೆರಗಿನಿಂದ
ಮಿನುಗು ತಾರೆ ನಲಿವಿನಿಂದ
ನನ್ನ ಕರೆಯಿತು 

ಬನದ ಎಲರ ಉಸಿರಿನಿಂದ
ದಳವ ತೆರೆದ ಹೂವಿನಿಂದ
ಮೊರೆವ ದುಂಬಿ ಒಲವಿನಿಂದ
ನನ್ನ ಕರೆಯಿತು 

ಬಿದಿರ ಮೆಳೆಯ ನೆಳಲಿನಿಂದ
ಕೇಳಿ ಬಂದ ಕೊಳಲಿನಿಂದ
ಚೆಲುವು ತುಂಬು ಗೆಲುವಿನಿಂದ
ನನ್ನ ಕರೆಯಿತು



Tuesday, December 4, 2012

ಮುಂಜಾನೆ ಮಂಜೆಲ್ಲ ಚಂದಾಗೈತೆ

Foggy view from our backyard this morning - inspiration for today's post.
Song - ಮುಂಜಾನೆ ಮಂಜೆಲ್ಲ ಚಂದಾಗೈತೆ
Album - Mavu Bevu
Lyrics - Doddarangegowda
Singer - S P Balasubramaniam
Link - http://www.kannadaaudio.com/Songs/Bhaavageethe/MavuBevu/Munjanne.ram


ಮುಂಜಾನೆ ಮಂಜೆಲ್ಲ ಚಂದಾಗೈತೆ..
ಸಂಗಾತಿ ತುಟಿ ಹಂಗೆ, ಹವಳಾದ ಮಣಿ ಹಂಗೆ ಹೊಳಪಾಗೈತೆ...

ಸಂಪಿಗೆ ತೂಗಿ ಚೆಂಡು ಹೂ ಬಾಗಿ
ನೇಸರ ನಗೆಸಾರ ಶುರುವಾಗೈತೆ
ಸೂಲಂಗಿ ತೆನೆಗೆ ಬಾಳೆಲೆ ಗೊನೆಗೆ
ತಂಗಾಳಿ ಸುಳಿದಾಡಿ ಹಾಡಾಗೈತೆ
ಕಣ್ಣಾಗಿ ಸಂಗಾತಿ ಕುಣಿದ್ಹಾಂಗೈತೆ
                                                     
ಮೋಡದ ದಂಡು ಓಡೋದ ಕಂಡು
ರಂಗೋಲಿ ವೈನಾಗಿ ಬರೆದ್ಹಂಗೈತೆ
ಆಕಾಶದ ಬದಿಗೆ ಗುಡ್ಡದ ತುದಿಗೆ
ಹೊಂಬಿಸಿಲು ರಂಗಾಗಿ ಬೆಳಕಾಗೈತೆ
ಮೈದುಂಬಿ ಮನಸೋತು ಮೆರೆದ್ಹಾಂಗೈತೆ.

Monday, December 3, 2012

ಏನೀ ಮಹಾನಂದವೆ ಓ ಭಾಮಿನಿ

Lyricist - ?
Music Director - Mysore Ananthaswamy
Singer - M D Pallavi

Link - http://mio.to/97jt

ಏನೀ ಮಹಾನಂದವೆ ಓ ಭಾಮಿನಿ
ಏನೀ ಸಂಭ್ರಮದಂದವೆ ಬಲು ಚೆಂದವೆ
ಏನೀ ವೃತ್ತಾಮೋದ ಏನೀ ಮೌರಜ ನಾದ
ಏನೀ ಜೀವೋನ್ಮಾದ ಏನೀ ವಿನೋದ

ಢಕ್ಕೆಯ ಶಿರಕ್ಕೆತ್ತಿ ತಾಳಗೋಲಿಂ ತಟ್ಟಿ
ತಕ್ಕಿಟ ಧಿಮಿಕಿಟ ಝಣುರೆನ್ನಿಸಿ
ಕುಕ್ಕುತ ಚರಣವ ಕುಲುಕುತ ಕಾಯವ
ಸೊಕ್ಕಿದ ಕುಣಿತವ ಕುಣಿವೆನೀನೆಲೆ ಬಾಲೆ

ಆರು ನಿನ್ನಯ ಹೃದಗಾರದಿ ನರ್ತಿಸಿ
ಮಾರ ಶೂರತೆಯ ಪ್ರಚಾರಿಸುತಿರ್ಪನ್
ಸ್ನೇರವದನ ನಮ್ಮ ಚೆನ್ನ ಕೇಶವರಾಯ
ಓರೆಗಣ್ಣಿಮ್ ಸನ್ನೆ ತೋರುತಲಿಹನೆನೆ
 
                                

Thursday, November 1, 2012

ಮಾನವನಾಗಿ ಹುಟ್ಟಿದ ಮೇಲೆ ಏನೇನ್ ಕಂಡಿ

ಮಾನವನಾಗಿ ಹುಟ್ಟಿದ ಮೇಲೆ ಏನೇನ್ ಕಂಡಿ
ಸಾಹಿತ್ಯ - Mugur Mallappa
ಹಾಡಿರುವವರು - Dr Rajkumar
 
 
 
ಮಾನವನಾಗಿ ಹುಟ್ಟಿದ ಮೇಲೆ ಏನೇನ್ ಕಂಡಿ |
ಸಾಯೋ ತನಕ ಸಂಸಾರದೊಳಗೆ ಗಂಡಾಗುಂಡಿ |
ಹೇರಿಕೊಂಡು ಹೋಗೋದಿಲ್ಲ ಸತ್ತಾಗ್ ಬಂಡಿ|
ಇರೋದರೊಳಗೆ ಒಮ್ಮೆ ನೋಡು ಜೋಗದ ಗುಂಡಿ   || ೧ ||

ತಾಳಗುಪ್ಪಿ ತಾರಕವೆಂಬ ಬೊಂಬಾಯ್ ಮಠ |
ಸಾಲಗುಡ್ಡದ ಮ್ಯಾಲೆ ನೋಟಕ ಭಟ್ಕಳ್ ಮಠ |
ದಾರಿ ಕಡಿದು ಮಾಡಿದರೆ ಗುಡ್ಡ ಬೆಟ್ಟ |
ಪಶ್ಚಿಮ ಘಟ್ಟದ ಮ್ಯಾಲೆ ನೋಡು ಮೈಸೂರ್ ಬಾವುಟ   || ೨ ||

ನಾಡಿನೊಳಗೆ ನಾಡು ಚೆಲುವ ಕನ್ನಡ ನಾಡು |
ಬೆಳ್ಳಿ ಬಂಗಾರ ಬೆಳಿಯುತಾವೆ ಬೆಟ್ಟ ಕಾಡು |
ಭೂಮಿತಾಯಿ ಮುಡಿದು ನಿಂತಾಳ್ ಬಾಸಿಂಗ್ ಜೋಡು |
ಬಾಣಾವತಿ ಬೆಡಗಿನಿಂದ ಬರ್ತಾಳೆ ನೋಡು   || ೩ ||

ಅಂಕು ಡೊಂಕು ವಂಕಿ ಮುರಿ ರಸ್ತೆದಾರಿ |
ಹತ್ತಿ ಇಳಿದು ಸುತ್ತಿದಂಗೆ ಹಾವಿನ ಮರಿ |
ತೊಟ್ಟಿಲ ಜೀಕಿ ಆಡಿದ್ಹಾಂಗೆ ಮನಸಿನ ಲಹರಿ |
ನಡೆಯುತದೆ ಮೈಸೂರೊಳಗೆ ದರಂದುರಿ   || ೪ ||

ಹೆಸರು ಮರ್ತಿ ಶರಾವತಿ ಅದೇನ್ ಕಷ್ಟ |
ಕಡೆದ ಕಲ್ಲ ಕಂಬದ ಮ್ಯಾಲೆ ಪೂಲಿನಕಟ್ಟ |
ಎಷ್ಟು ಮಂದಿ ಎದೆಯ ಮುರಿದು ಪಡುತಾರ್ ಕಷ್ಟ |
ಸಣ್ಣದರಿಂದ ದೊಡ್ಡದಾಗಿ ಕಾಣೋದ್ ಬೆಟ್ಟ   || ೫ ||

ಬುತ್ತಿ ಉಣುತಿದ್ರುಣ್ಣು ಇಲ್ಲಿ ಸೊಂಪಾಗಿದೆ |
ಸೊಂಪು ಇದಪು ಸೇರಿ ಮನಸು ಕಂಪಾಗ್ತದೆ |
ಕಂಪಿನಿಂದ ಜೀವಕ್ಕೊಂದು ತಂಪಾಗ್ತದೆ |
ತಂಪಿನೊಳಗೆ ಮತ್ತೊಂದೇನೋ ಕಾಣಸ್ತದೆ    || ೬ ||

ಅಡ್ಡ ಬದಿ ಒಡ್ಡು ನಲಿಸಿ ನೀರಿನ ಮಿತಿ |
ಇದರ ಒಳಗೆ ಇನ್ನು ಒಂದು ಹುನ್ನಾರೈತಿ |
ನೀರ ಕೆಡವಿ ರಾಟೆ ತಿರುವಿ ಮಿಂಚಿನ ಶಕ್ತಿ |
ನಾಡಿಗೆಲ್ಲ ಕೊಡ್ತಾರಂತೆ ದೀಪದ ತಂತಿ    || ೭ ||

ಊಟ ಮುಗಿದಿದ್ರೇಳು ಮುಂದೆ ನೋಡೋದದೆ |
ನೋಡುತ್ತಿದ್ರೆ ಬುದ್ಧಿ ಕೆಟ್ಟು ಹುಚ್ಚಾಗ್ತದೆ |
ಬೇಕಾದ್ರಲ್ಲಿ ಉಡುಪಿ ಮಾವನ ಮನೆಯೊಂದಿದೆ |
ಉಳಿಯೋದಾದ್ರೆ ಮಹರಾಜ್ರ ಬಂಗ್ಲೆ ಅದೆ  || ೮ ||

ನೋಡು ಗೆಳೆಯ ಜೋಕೆ ಮಾತ್ರ ಪಾತಾಳ ಗುಂಡಿ |
ಹಿಂದಕೆ ಸರಿದು ನಿಲ್ಲು ತುಸು ಕೈತಪ್ಪಿಕೊಂಡಿ |
ಕೈಗಳಳ್ತಿ ಕಾಣಸ್ತದೆ ಬೊಂಬಾಯ್ ದಂಡೀ |
ನಮ್ಮದಂದ್ರೆ ಹೆಮ್ಮೆಯಲ್ಲ ಜೋಗದ ಗುಂಡೀ  || ೯ ||

ಶಿಸ್ತುಗಾರ ಶಿವಪ್ಪನಾಯ್ಕ ಕೆಳದಿಯ ನಗರ |
ಚಿಕ್ಕದೇವ ದೊಡ್ಡದೇವ ಮೈಸೂರಿನವರ |
ಹಿಂದಕ್ಕಿಲ್ಲಿ ಬಂದಿದ್ರಂತೆ ಶ್ರೀರಾಮರ |
ಎಲ್ಲ ಕಥೆ ಹೇಳುತದೆ ಕಲ್ಪಾಂತರ   || ೧೦ ||

ರಾಜ ರಾಕೆಟ್ ರೋರರ್ ಲೇಡಿ ಚತುರ್ಮುಖ |
ಜೋಡಿಗೂಡಿ ಹಾಡಿತಾವೆ ಹಿಂದಿನ ಸುಖ |
ತಾನು ಬಿದ್ರೆ ಆದೀತೆಳು ತಾಯಿಗೆ ಬೆಳಕ |
ಮುಂದಿನವರು ಕಂಡರೆ ಸಾಕು ಸ್ವಂತ ಸುಖ   || ೧೧ ||

ಒಂದು ಎರಡು ಮೂರು ನಾಲ್ಕು ಆದಾವ್ ಮತ |
ಹಿಂದಿನಿಂದ ಹರಿದು ಬಂದದ್ದೊಂದೇ ಮತ |
ಗುಂಡಿ ಬಿದ್ದು ಹಾಳಾಗಲಿಕ್ಕೆ ಸಾವಿರ ಮತ |
ಮುಂದೆ ಹೋಗಿ ಸೇರುವಲ್ಲಿಗೊಂದೇ ಮತ    || ೧೨ ||

ಷಹಜಹಾನ ತಾಜಮಹಲು ಕೊಹಿನೂರ್ ಮಣಿ |
ಸಾವಿರಿದ್ರು ಸಲ್ಲವಿದಕೆ ಚೆಲುವಿನ ಕಣಿ |
ಜೀವವಂತ ಶರಾವತಿಗಿನ್ನಾವ್ದೆಣಿ |
ಹೊಟ್ಟೆಕಿಚ್ಚಿಗಾಡಿಕೊಂಡ್ರೆ ಅದಕಾರ್ ಹೊಣೆ   || ೧೩ ||

ಶರಾವತೀ ಕನ್ನಡ ನಾಡ ಭಾಗೀರಥಿ |
ಪುಣ್ಯವಂತ್ರು ಬರ್ತಾರಿಲ್ಲಿ ದಿನಂಪ್ರತೀ |
ಸಾವು ನೋವು ಸುಳಿಯದಿಲ್ಲಿಯ ಕರಾಮತಿ |
ಮಲ್ಲೇಶನ ನೆನೆಯುತಿದ್ರೆ ಜೀವನ್ಮುಕ್ತಿ   || ೧೪ ||

Wednesday, October 31, 2012

ಬಾರಿಸು ಕನ್ನಡ ಡಿಂಡಿಮವ

ಬಾರಿಸು ಕನ್ನಡ ಡಿಂಡಿಮವಸಾಹಿತ್ಯ - Kuvempu

ರಾಗ ಸಂಯೋಜನೆ - Mysore Ananthaswamy
ಹಾಡಿರುವವರು - Puttur Narasimha Nayak
 

ಬಾರಿಸು ಕನ್ನಡ ಡಿಂಡಿಮವ
ಓ ಕರ್ನಾಟಕ ಹೃದಯ ಶಿವ

ಸತ್ತಂತಿಹರನು ಬಡಿದೆಚ್ಚರಿಸು
ಕಚ್ಚಾಡುವರನು ಕೂಡಿಸಿ ಒಲಿಸು
ಹೊಟ್ಟೆಯ ಕಿಚ್ಚಿಗೆ ಕಣ್ಣೀರ್ ಸುರಿಸು
ಒಟ್ಟಿಗೆ ಬಾಳುವ ತೆರದಲಿ ಹರಸು

ಕ್ಷಯಿಸೆ ಶಿವೇತರ ಕೃತಿ ಕೃತಿಯಲ್ಲಿ
ಮೂಡಲಿ ಮಂಗಳ ಮತಿ ಮತಿಯಲ್ಲಿ
ಕವಿ ಋಷಿ ಸಂತರ ಆದರ್ಶದಲಿ
ಸರ್ವೋದಯವಾಗಲಿ ಸರ್ವರಲಿ

Tuesday, October 30, 2012

ಸುಮಸುಂದರ ತರುಲತೆಗಳ ಬೃಂದಾವನ ಲೀಲೆ

ಸುಮಸುಂದರ ತರುಲತೆಗಳ ಬೃಂದಾವನ ಲೀಲೆ
ಸಾಹಿತ್ಯ - Sa Shi Marulayya

A song we sang at school for most of the Rajyotsava celeberations, but unfortunately I cannot find a audio link for this song.



ಸುಮಸುಂದರ ತರುಲತೆಗಳ ಬೃಂದಾವನ ಲೀಲೆ
ಸುಪ್ರಭೋಧ ಚಂದ್ರೋದಯ ರಾಗಾರುಣ ಜ್ವಾಲೆ
ಗಿರಿ ಸಿರಿ ಬನ ಸಂಚಾರಿಣಿ ತುಂಗಾಜಲ ಧಾರೆ
ಧಲ ಧಲ ಧಲ ಮೆದು ಹಾಸಲಿ ಗಾನ ಸುಪ್ತಲೋಲೆ ||

ಮಲೆನಾಡಿನ ಕೋಗಿಲೆಯೇ ಬಯಲನಾಡ ಮಲ್ಲಿಗೆಯೇ
ವಂಗ ವಿಷಯ ಭೃಂಗವೆ ಧವಳಗಿರಿಯ ಶೃ೦ಗವೆ
ಕಾವೇರಿ... ಗೋದಾವರಿ... ಗಂಗೆ ಯಮುನೆ ಸಿಂಧುವೆ ||

ಶತ ಶತ ಶತಮಾನಗಳ ಗುಪ್ತಗಾಮಿ ಚೇತನವೇ
ಋತು ಋತುವಿಗೂ ಹೂವಾಗಿ ಫಲವಾಗುವ ತನಿರಸವೇ
ಚಿಲಿಪಿಲಿಯಂಥಾಮೋದದಿ  ನಲಿದುಲಿವ ಕೂಜನವೇ
ಮಧುರ ಮಂದಾನಿಲ ಸೌಗಂಧದ ಸಿರಿ ಪರಿಮಳವೇ ||

ನಸು ಹಸುರಿನ ಹಿಮಮಣಿಯೇ
ಎಳೆ ಬಿಸಿಲಿನ ಮೆಲುದನಿಯೇ
ಬಿರಿದ ಮುಗಿಲ ಬಿಂಕವೇ
ತೆರೆದ ಸೋಗೆ ನರ್ತನವೇ

Monday, October 29, 2012

ಸ್ಥವಿರ ಗಿರಿಯ ಚಲನದಾಸೆ

ಸ್ಥವಿರ ಗಿರಿಯ ಚಲನದಾಸೆ

ಸಾಹಿತ್ಯ - Pu Ti Na
ರಾಗ ಸಂಯೋಜನೆ - C Ashwath
ಹಾಡಿರುವವರು - Divya Raghavan, Mangala Ravi
 
 
 
ಸ್ಥವಿರ ಗಿರಿಯ ಚಲನದಾಸೆ ಮೂಕವನದ ಗೀತದಾಸೆ
ಸೃಷ್ಟಿ ಹೊರೆಯ ಹೊತ್ತ ತಿರೆಯ ನಗುವಿನಾಸೆ ನಾ
ಬಾಳ್ವೆಗೆಲ್ಲ ನಾನೆ ನೆಚ್ಚು ಲೋಕಕೆಲ್ಲ ಅಚ್ಚು ಮೆಚ್ಚು
ನಾನೆ ನಾನೆ ವಿಧಿಯ ಹುಚ್ಚು ಹೊನಲ ರಾಣಿ ನಾ

ಕಿರಣ ನೇಯ್ದ ಸರಿಗೆಯುಡಿಗೆ ಇರುಳು ಕೊಟ್ಟ ತಾರೆ ತೊಡಿಗೆ
ಇಂದು ಕಳೆಯ ಹೂವೆ ಮುಡಿಗೆ ದೇವಕನ್ಯೆ ನಾ
ಬೆಳ್ಳಿ ನೊರೆಯ ನಗೆ ನಗುತ್ತ ತೆರೆಯ ನಿರಿಯ ಚಿಮುಕಿಸುತ್ತ
ಕಡಲ ವರಿಸೆ ತವಕಿಸುತ್ತ ನಡೆವ ವಧುವೆ ನಾ

ಲಲಿತ ಕುಣಿತವೆನ್ನ ಶೀಲ ಚಲನವೆನ್ನ ಜೀವಾಳ
ಲುಪ್ತಮಾಗೆ ದೇಶ ಕಾಲ ಎನ್ನ ಗಾಯನ
ದಡದ ಗಿಡಕೆ ಪುಷ್ಪಹಾಸ ಸನಿಹ ದಿಳೆಗೆ ಸಸ್ಯಹಾಸ
ಹಾಸಕೀರ್ಣ ಹಾಸಪೂರ್ಣ ಎನ್ನ ಜೀವನ

ನಾನು ನಿಲ್ವುದೊಂದೆ ಚಣಮ್ ಸತತ ಕರ್ಮವೆನ್ನ ಗುಣಮ್
ಅದಕೆ ಕಾಣೆ ಗೋಡ ನಡಮ್ ಹರ್ಷಮ್ ಎನಗೆ ಚಿರಂತನಮ್
ಗವಿಗಳಲ್ಲಿ ಹುಳ್ಳನಡಗಿ ಬಂಡೆ ಮೇಲೆ ಹೂವ ನೆರಗಿ
ಮಡುವೆನಿಂದ ಮೆಲ್ಲನೆ ಜರುಗಿ ಕಡಲಿಗೋಡುವೆ

ಅಜರ ಜಗದ ಚಲನದಾಸೆ ಮೂಕ ಜಗದ ಗೀತದಾಸೆ
ನಿಯತಿ ನಿಯಮ ನಿಯತ ಜಗದ ನಗುವಿನಾಸೆ ನಾ
ವನ ವಿನೋದ ಮಲೆ ಅಮೋದ ಮುಗಿಲ ಮೇಲ್ಮೆ ನಾಡ ನಲ್ಮೆ
ನಾನೆ ನಾನೆ ವಿವದ ಒಲುಮೆ ಹೊನಲ ರಾಣಿ ನಾ
 
 

Friday, October 26, 2012

ಅಮ್ಮ ನಾನು ದೇವರಾಣೆ ಬೆಣ್ಣೆ ಕದ್ದಿಲ್ಲಮ್ಮ

Presenting two songs today - "ಬೆಣ್ಣೆ ಕದ್ದ ನಮ್ಮ ಕೃಷ್ಣ" by K S Nissar Ahmed and "ಅಮ್ಮ ನಾನು ದೇವರಾಣೆ ಬೆಣ್ಣೆ ಕದ್ದಿಲ್ಲಮ್ಮ" by H S Venkatesha Murthy. Even though the songs are written by two different poets, it sounds as if H S Venkatesha Murthy wrote "ಅಮ್ಮ ನಾನು ದೇವರಾಣೆ ಬೆಣ್ಣೆ ಕದ್ದಿಲ್ಲಮ್ಮ" in Krishna's defense, in response to the Gopi's accusation on Krishna in "ಬೆಣ್ಣೆ ಕದ್ದ ನಮ್ಮ ಕೃಷ್ಣ".

ಅಮ್ಮ ನಾನು ದೇವರಾಣೆ ಬೆಣ್ಣೆ ಕದ್ದಿಲ್ಲಮ್ಮ

ಸಾಹಿತ್ಯ - H S Venkatesha Murthy
ರಾಗ ಸಂಯೋಜನೆ - Mysore Ananthaswamy
ಹಾಡಿರುವವರು - M D Pallavi
 
 
ಅಮ್ಮ ನಾನು ದೇವರಾಣೆ ಬೆಣ್ಣೆ ಕದ್ದಿಲ್ಲಮ್ಮ
ಎಲ್ಲಾ ಸೇರಿ ನನ್ನ ಬಾಯಿಗೆ ಬೆಣ್ಣೆಯ ಮೆತ್ತಿದರಮ್ಮ

ನೀನೆ ನೋಡು ಬೆಣ್ಣೆಗಡಿಗೆ ಸೂರಿನ ನೆಲುವಲ್ಲಿ
ಹೇಗೆ ತಾನೇ ತೆಗೆಯಲಿ ಅಮ್ಮ ನನ್ನ ಪುಟ್ಟ ಕೈಗಳಲ್ಲಿ

ಶಾಮ ಹೇಳಿದ ಬೆಣ್ಣೆ ಮೆತ್ತಿದ ತನ್ನ ಬಾಯಿ ಒರೆಸುತ್ತಾ
ಬೆಣ್ಣೆ ಒರೆಸಿದ ಕೈಯ ಬೆನ್ನ ಹಿಂದೆ ಮರೆಸುತ್ತಾ

ಎತ್ತಿದ ಕೈಯ ಕಡಗೋಲನ್ನು ಮೂಲೆಲಿಟ್ಟು ನಕ್ಕಳು ಗೋಪಿ
ಸೂರದಾಸ ಪ್ರಿಯಶಾಮನ ಮುತ್ತಿಟ್ಟು ನಕ್ಕಳು ಗೋಪಿ

ಬೆಣ್ಣೆ ಕದ್ದ ನಮ್ಮ ಕೃಷ್ಣ

Presenting two songs today - "ಬೆಣ್ಣೆ ಕದ್ದ ನಮ್ಮ ಕೃಷ್ಣ" by K S Nissar Ahmed and "ಅಮ್ಮ ನಾನು ದೇವರಾಣೆ ಬೆಣ್ಣೆ ಕದ್ದಿಲ್ಲಮ್ಮ" by H S Venkatesha Murthy. Even though the songs are written by two different poets, it sounds as if H S Venkatesha Murthy wrote "ಅಮ್ಮ ನಾನು ದೇವರಾಣೆ ಬೆಣ್ಣೆ ಕದ್ದಿಲ್ಲಮ್ಮ" in Krishna's defense, in response to the Gopi's accusation on Krishna in "ಬೆಣ್ಣೆ ಕದ್ದ ನಮ್ಮ ಕೃಷ್ಣ".

ಬೆಣ್ಣೆ ಕದ್ದ ನಮ್ಮ ಕೃಷ್ಣ
ಸಾಹಿತ್ಯ - K S Nissar Ahmed
ರಾಗ ಸಂಯೋಜನೆ - Mysore Ananthaswamy
ಹಾಡಿರುವವರು - Chorus
 
 
ಬೆಣ್ಣೆ ಕದ್ದ ನಮ್ಮ ಕೃಷ್ಣ ಬೆಣ್ಣೆ ಕದ್ದನಮ್ಮ
ಬೆಣ್ಣೆ
ಕದ್ದು ಜಾರುತ ಬಿದ್ದು ಮೊಣಕಾಲೂದಿಸಿಕೊಂಡನಮ್ಮಬಿಂದಿಗೆ
ಬಿದ್ದು ಸಿಡಿಯಲು ಸದ್ದು ಬೆಚ್ಚಿದ ಗೋಪಿಯ ಕಂದನಮ್ಮ

ತಾಯಿ ಬಂದಳೋಡಿ, ಕಳ್ಳನ ಕಣ್ಣಿನಲ್ಲಿ ಖೋಡಿಕಣ್ಣಲಿ
ತಾಯಿ ಸಿಟ್ಟನು ತಳೆದು ಸೊಂಟಕೆ ಕೈಯಿಟ್ಟುಆದಳು
ಅರೆಕ್ಷಣ ಭೀಕರ ಕಾಳಿ ದುರು ದುರು ಕಣ್ಬಿಟ್ಟು

ಹಣೆ ತುಟಿ ಕೆನ್ನೆಗೆ ಬೆಣ್ಣೆ ಮೆತ್ತಿದ ಒರಟನ ನೋಟಕ್ಕೆಇಳಿಯಿತು
ಕೋಪ ಅರಳಿತು ಕೆಂದುಟಿ ತುಂಟನ ಆಟಕ್ಕೆತಪ್ಪಿದ
ದಂಡಕೆ ನಿಟ್ಟುಸಿರೆಳೆದ ಬೆಣ್ಣೆಗಳ್ಳ ನೀಲತಟ್ಟನೆ
ಅಳುವುದ ನಿಲ್ಲಿಸಿ ನಕ್ಕ ಬಾಯಗಲಿಸಿ ಬಾಲಅರಳಿದ
ಬೆಳದಿಂಗಳ ಜಾಲಅವನ
ಅಕುಟಿಲ ಬೆಣ್ಣೆಯಂತ ನಗು ಕಾಯಲಿ ಜಗದವರಸಂತತ
ನಗಿಸಲಿ ನಗದವರ

Thursday, October 25, 2012

ಲೋಕದ ಕಣ್ಣಿಗೆ ರಾಧೆಯು ಕೂಡ

ಲೋಕದ ಕಣ್ಣಿಗೆ ರಾಧೆಯು ಕೂಡ
ಸಾಹಿತ್ಯ - H S Venkatesha Murthy
ರಾಗ ಸಂಯೋಜನೆ - Mysore Ananthaswamy
ಹಾಡಿರುವವರು - M D Pallavi
 
 
 
 
ಲೋಕದ ಕಣ್ಣಿಗೆ ರಾಧೆಯು ಕೂಡ
ಎಲ್ಲರಂತೆ ಒಂದು ಹೆಣ್ಣು.
ನನಗೋ ಆಕೆ ಕೃಷ್ಣನ ತೋರುವ
ಪ್ರೀತಿಯು ನೀಡಿದ ಕಣ್ಣು.

ತಿಂಗಳ ರಾತ್ರಿ ತೊರೆಯ ಸಮೀಪ
ಉರಿದಿರೆ ಯಾವುದೋ ದೀಪ,
ಯಾರೋ ಮೋಹನ, ಯಾವ ರಾಧೆಗೋ,
ಪಡುತಿರುವನು ಪರಿತಾಪ.

ನಾನು ನನ್ನದು ನನ್ನವರೆನ್ನುವ
ಹಲವು ತೊಡಕುಗಳ ಮೀರಿ,
ಭಾವಿಸಿ ಸೇರಲು ಬೃಂದಾವನವ,
ರಾಧೆ ತೋರುವಳು ದಾರಿ.

ಮಹಾಪ್ರವಾಹ, ತಡೆಯುವರಿಲ್ಲ,
ಪಾತ್ರವಿರದ ತೊರೆ ಪ್ರೀತಿ.
ತೊರೆದರು ತನ್ನ, ತೊರೆಯದು ಪ್ರಿಯನ,
ರಾಧೆಯ ಪ್ರೀತಿಯ ರೀತಿ, ಇದು
ರಾಧೆಯ ಪ್ರೀತಿಯ ರೀತಿ.

Wednesday, October 24, 2012

ಅಕೋ ಶ್ಯಾಮ ಅವಳೇ ರಾಧೆ

ಅಕೋ ಶ್ಯಾಮ ಅವಳೇ ರಾಧೆ
ಸಾಹಿತ್ಯ - Pu Ti Na
ರಾಗ ಸಂಯೋಜನೆ - C Ashwath
ಹಾಡಿರುವವರು - M S Sheela & K S Surekha

http://www.kannadaaudio.com/Songs/Bhaavageethe/BhaavaBindu/Ako.ram


ಅಕೋ ಶ್ಯಾಮ ಅವಳೇ ರಾಧೆ
ನಲಿಯುತಿಹರು ಕಾಣಿರೇ
ನಾವೆ ರಾಧೆ ಅವನೇ ಶ್ಶಾಮ
ಬೇರೆ ಬಗೆಯ ಮಾಣಿರೇ

ಕಲರವದೊಳು ಯಮುನೆ ಹರಿಯೆ
ಸೋಬಾನೆಯ ತರುಗಳುಲಿಯೆ
ತೆನೆತೆನೆಯೊಳು ಹರಸಿದಂತೆ
ಬಾನಿಂ ಜೊನ್ನ ಭೂಮಿಗಿಳಿಯೆ

ಕಂಪ ಬಿಡುವ ದಳಗಳಂತೆ
ಸುತ್ತಲರಳಿ ಕೊಳ್ಳಿರೇ
ಒಲುಮೆಗಿಡುವ ಪ್ರಭಾವಳಿಯ
ತೆರದಿ ಬಳಸಿ ನಿಲ್ಲಿರೇ

ಕಡಗ ಕಂಕಣ ಕಿನಿಕಿನಿಯೆನೆ
ಅಡಿಗೆಯಿರುಲೆ ಝಣರೆನೆ
ಎದೆ ನುಡಿತಕೆ ಚುಕ್ಕಿ ಮಿಡಿಯೆ
ಕೊಳಲನೂದಿ ಕುಣಿವನೆ

ನಮ್ಮ ಮನವ ಕೋದು
ಮಾಲೆ ಗೈದು ಮುಡಿಯುತಿಹನೆನೆ
ಮಾಧವನೂದುವ ಮಧುರ ಗಾನ
ಎದೆಯ ಹಾಯ್ವುದಾಯೆನೆ

ನೋಡಿ ತಣಿಯೆ ಹಾಡಿ ತಣಿಯೆ
ಲೇಸನಾಡಿ ತಣಿಯೆನೆ
ಕುಣಿದು ತಣಿಯೆ ದಣಿದು ತಣಿಯೆ
ದಣಿವಿಲ್ಲದೆ ನಲಿವೆನೆ

Tuesday, October 23, 2012

ಪ್ರೀತಿ ಕೊಟ್ಟ ರಾಧೆಗೆ

For the rest of this week, we will listen to a few Radha - Krishna songs.

ಪ್ರೀತಿ ಕೊಟ್ಟ ರಾಧೆಗೆ
ಸಾಹಿತ್ಯ - H S Venkatesha Murthy
ರಾಗ ಸಂಯೋಜನೆ - Mysore Ananthaswamy
ಹಾಡಿರುವವರು - M D Pallavi


http://www.kannadaaudio.com/Songs/Bhaavageethe/LiveConcert-3-PallaviArun/Preethi.ram

ಪ್ರೀತಿ ಕೊಟ್ಟ ರಾಧೆಗೆ
ಮಾತು ಕೊಟ್ಟ ಮಾಧವ
ತನ್ನನಿತ್ತ ಕೊಳಲಿಗೆ
ರಾಗ ತೆತ್ತ ಮಾಧವ

ಗಂಧ ಕೊಟ್ಟ ಹೆಣ್ಣಿಗೆ
ಅಂದ ಕೊಟ್ಟ ಮಾಧವ
ಅನ್ನ ಕೊಟ್ಟ ಭಕ್ತಗೆ
ಹೊನ್ನ ಕೊಟ್ಟ ಮಾಧವ

ಹಾಲು ಕೊಟ್ಟ ವಿಧುರಗೆ
ಬಾಳು ಕೊಟ್ಟ ಮಾಧವ
ದೇಹ ಕೊಟ್ಟ ಮಣ್ಣಿಗೆ
ಜೀವ ಕೊಟ್ಟ ಮಾಧವ

Monday, October 22, 2012

ಮೈಸೂರು ದಸರ ಎಷ್ಟೊಂದು ಸುಂದರ

"ಮೈಸೂರು ದಸರ ಎಷ್ಟೊಂದು ಸುಂದರ" from the movie "ಕರುಳಿನ ಕರೆ".
ಹಾಡಿರುವವರು Dr. P B Sreenivas.
Not really a bhaavageete, but dasara always brings fond memories of the festivities and celebrations in Mysore.

http://www.kannadaaudio.com/Songs/Compilations/Legends-PB-Sreenivos-3/Mysooru-Dasara.ram



ಮೈಸೂರು ದಸರ ಎಷ್ಟೊಂದು ಸುಂದರ
ಚೆಲ್ಲಿದೆ ನಗೆಯ ಪನ್ನೀರ
ಎಲ್ಲೆಲ್ಲು ನಗೆಯ ಪನ್ನೀರ

ಚಾಮುಂಡಿ ಮಹಿಶನ ಕೊಂದ ಮಹಾರಾತ್ರಿ
ಧರ್ಮ ಅಧರ್ಮವ ಸೋಲಿಸಿದ ರಾತ್ರಿ
ಕನ್ನಡ ಜನತೆಗೆ ಮಂಗಳ ರಾತ್ರಿ
ಮನೆಮನೆ ನಲಿಸುವ ಶುಭ ನವರಾತ್ರಿ

ಮಾರ್ನೋಮಿ ಆಯುಧ ಪೂಜೆಯ ಮಾಡಿ
ಮಾತಾಯ ಚರಣದಿ ವರವನು ಬೇಡಿ
ಮಕ್ಕಳು ನಾವೆಲ್ಲ ಒಂದಾಗಿ ಕೂಡಿ
ಕೊಂಡಾಡುವ ಬನ್ನಿ ಶುಭ ನವರಾತ್ರಿ

ಶತ್ರುವ ಅಳಿಸಲು ಷತ್ರವ ಹೂಡಿ
ಬಡತನ ಹರಿಸಲು ಪಂಥವ ಮಾಡಿ
ಹೆಗಲಿಗೆ ಹೆಗಲು ನಾವು ಜೊತೆ ನೀಡಿ
ಕುಣಿಯೋನ ತಾಯಿಯ ಹೆಸರನು ಹಾಡಿ

Friday, October 19, 2012

ಕೆಂಪಾದವೊ ಎಲ್ಲ ಕೆಂಪಾದವೊ

"ಕೆಂಪಾದವೊ ಎಲ್ಲ ಕೆಂಪಾದವೊ"
lyrics - P Lankesh

Although the context and the meaning of the song is much darker and deeper in the movie "ಎಲ್ಲಿಂದಲೊ ಬಂದವರು", in a literal sense, the song can very well be thought to describe the vibrant fall colors.

http://www.youtube.com/watch?v=8UIQvii7PIg

ಕೆಂಪಾದವೊ ಎಲ್ಲ
ಕೆಂಪಾದವೊಹಸುರಿದ್ದ
ಗಿಡಮರ ಬೆಳ್ಳಗಿದ್ದ ಹೂವೆಲ್ಲ ನೆತ್ತರ ಸುರಿಧ್ಹಾಂಗೆ ಕೆಂಪಾದವೊ
ಹುಲ್ಲು ಬಳ್ಳಿಗಳೆಲ್ಲ ಕೆಂಪಾದವೊಊರು
ಕಂದಮ್ಮಗಳು ಕೆಂಪಾದವೊಹುಲ್ಲು
ಬಳ್ಳಿಗಳೆಲ್ಲ ಕೆಂಪಾದವೊಊರು
ಕಂದಮ್ಮಗಳು ಕೆಂಪಾದವೊ
ಜೊತೆಜೊತೆಗೆ ನಡೆದಗ ನೀಲ್ಯಾಗಿ ನಲಿದಂತಕಾಯುತ್ತ
ಕೂತಾಗ ಕಪ್ಪಾಗಿ ಕವಿದಂತನುಡಿ
ನುಡಿಗು ಹೋದಾಗ ಪಚ್ಚೆಯ ತೆನೆಯಂತಭೂಮಿಯು
ಎಲ್ಲಾನು ಕೆಂಪಾದವೊನನಗಾಗ
ಕೆಂಪಾದವೊ  

Wednesday, October 17, 2012

ಕಾಡು ಕುದುರೆ ಓಡಿ ಬಂದಿತ್ತಾ

I had always thought that ’ಕಾಡು ಕುದುರೆ ಓಡಿ ಬಂದಿತ್ತ’ is a folk song. Turns out it is a song written by Chandrashekara Kambara for the movie 'Kaadu Kudure'. The song is sung by Shimoga Subbanna & Kalpana Shirur.

http://www.raaga.com/play/?id=191041

ಕಾಡು ಕುದುರೆ ಓಡಿ ಬಂದಿತ್ತಾ…
ಕಾಡು ಕುದುರೆ ಓಡಿ ಬಂದಿತ್ತಾ
ಊರಿನಾಚೆ ದೂರದಾರಿ
ಸುರುವಾಗೊ ಜಾಗದಲ್ಲಿ
ಮೂಡಬೆಟ್ಟ ಸೂರ್ಯ ಹುಟ್ಟಿ
ಹೆಸರಿನ ಗುಟ್ಟ ಒಡೆವಲ್ಲಿ
ಮುಗಿವೇ ಇಲ್ಲದ ಮುಗಿಲಿನಿಂದ
ಜಾರಿಬಿದ್ದ ಉಲ್ಕೀ ಹಾಂಗ
ಕಾಡಿನಿಂದ ಚಂಗನೆ ನೆಗೆದಿತ್ತ



ಮೈಯಾ ಬೆಂಕಿ ಮಿರುಗತಿತ್ತ
ಬ್ಯಾಸ್ಗಿ ಬಿಸಿಲ ಉಸಿರಾಡಿತ್ತ
ಹೊತ್ತಿ ಉರಿಯೊ ಕೇಶರಾಶಿ
ಕತ್ತಿನಾಗ ಕುಣೀತಿತ್ತ
ಧೂಮಕೇತು ಹಿಂಬಾಲಿತ್ತ
ಹೌಹಾರಿತ್ತ ಹರಿದಾಡಿತ್ತ
ಹೈಹೈ ಅಂತ ಹಾರಿಬಂದಿತ್ತ


ಕಣ್ಣಿನಾಗ ಸಣ್ಣ ಖಡ್ಗ
ಆಸುಪಾಸು ಝಳಪಿಸಿತ್ತ
ಬೆನ್ನ ಹುರಿ ಬಿಗಿದಿತ್ತಣ್ಣ
ಸೊಂಟದ ಬುಗುರಿ ತಿರಗತಿತ್ತ
ಬಿಗಿದ ಕಾಂಡ ಬಿಲ್ಲಿನಿಂದ
ಬಿಟ್ಟ ಬಾಣಧಾಂಗ ಚಿಮ್ಮಿ
ಹದ್ದ ಮೀರಿ ಹಾರಿ ಬಂದಿತ್ತ


ನೆಲ ಒದ್ದು ಗುದ್ದ ತೋಡಿ
ಗುದ್ದಿನ ಬದ್ದಿ ಒದ್ದಿಯಾಗಿ
ಒರತಿ ನೀರು ಭರ್ತಿಯಾಗಿ
ಹರಿಯೋಹಾಂಗ ಹೆಜ್ಜೀ ಹಾಕಿ
ಹತ್ತಿದವರ ಎತ್ತಿಕೊಂಡು
ಏಳಕೊಳ್ಳ ತಿಳ್ಳೀ ಹಾಡಿ
ಕಳ್ಳೆ ಮಳ್ಳೆ ಆಡಿಸಿ ಕೆಡವಿತ್ತ

Tuesday, October 16, 2012

ಕೋಡಗನ ಕೋಳಿ ನುಂಗಿತ್ತ

ಜಿ. ಪಿ. ರಾಜರತ್ನಂ ಅವರ "ಕೋಳಿಕೆ ರಂಗ" ಕೇಳಿ, ಶಿಶುನಾಳ ಶರೀಫರ "ಕೋಡಗನ ಕೋಳಿ" ನೆನಪಿಗೆ ಬಂದಿತು

http://www.kannadaaudio.com/Songs/Folk/KodaganaKoliNungitta/KodaganaKoliNungitta.ram

ಕೋಡಗನ ಕೋಳಿ ನುಂಗಿತ್ತ 
ನೋಡವ್ವ ತಂಗಿ ಕೋಡಗನ ಕೋಳಿ ನುಂಗಿತ್ತ

ಆಡು ಆನೆಯ ನುಂಗಿ
ಗೋಡೆ ಸುಣ್ಣವ ನುಂಗಿ
ಆಡಲು ಬಂದ ಪಾತರದವಳ ಮದ್ದಳೆ ನುಂಗಿತ್ತ

ಒಳ್ಳು ಒನಕೆಯ ನುಂಗಿ
ಕಲ್ಲು ಗೂಟವ ನುಂಗಿ
ಮೆಲ್ಲಲು ಬಂದ ಮುದುಕಿಯನ್ನೆ ನೆಲ್ಲು ನುಂಗಿತ್ತ

ಹಗ್ಗ ಮಗ್ಗವ ನುಂಗಿ
ಮಗ್ಗವ ಲಾಳಿ ನುಂಗಿ
ಮಗ್ಗದಾಗಿರುವ ಅಣ್ಣನನ್ನೆ ಮಣಿಯು ನುಂಗಿತ್ತ

ಎತ್ತು ಜತ್ತಗಿ ನುಂಗಿ
ಬತ್ತ ಬಾಣವ ನುಂಗಿ
ಮುಕ್ಕುಟ ತಿರುವೊ ಅಣ್ಣನ ಕುಣಿಯು ನುಂಗಿತ್ತ

ಗುಡ್ಡ ಗವಿಯನ್ನು ನುಂಗಿ
ಗವಿಯು ಇರುವೆಯು ನುಂಗಿ
ಗೋವಿಂದ ಗುರುವಿನ ಪಾದ ನನ್ನನೆ ನುಂಗಿತ್ತ
 

Monday, October 15, 2012

ನಾನು ಕೋಳಿಕೆ ರಂಗ

T P Kailasam avara  "Kolike Ranga".

http://www.kannadaaudio.com/Songs/Folk/MoodutaRavi/NaanuKolikeranga.ram

Constantinople

C O N S T A N T I N O P L E
C O N S T A N T I N O P L E
Use your pluck now try your luck to sing along with me,

Constantinople
C O N S T A N T I N O P L E
C O N S T A N T I N O P L E
It’s as easy to sing as you sing your A-B-C.

ನಾನು ಕೋಳಿಕೆ ರಂಗ
ಕೋನುಳಿನುಕೆನುನು ಸೊನ್ನೆ
ಕೋತ್ವ ಳಿ ಕಕೆತ್ವ ಮತ್ ಸೋನ್ನೆಯುನು
ಇದ್ನ ಹಾಡೋಕ್ ಬರ್ದೆ ಬಾಯ್ ಬಿಡೋವ್ನು ಹಃ ಹಃ ಹಃ
ಬೆಪ್ಪು ನನ್ ಮಗ

ನಾನು ಕೋಳಿಕೆ ರಂಗ
ಕೋನುಳಿನುಕೆನುನು ಸೊನ್ನೆ
ಕಕೊತ್ವ ಳಿ ಕಕೆತ್ವ ಮತ್ ಸೋನ್ನೆಯುನು
ನಮ್ಮ ತಿಪ್ಪಾರಳ್ಳಿ ಬೋರನ್ ಅಣ್ಣನ್ ತಮ್ಮನ್ ದೊಡ್ಡ್ ಮಗ

ನಾ ಹುಟ್ಟಿದ್ ದೊಡ್ದ್ರಳ್ಳಿ, ಬೆಳ್ದಿದ್ ಬ್ಯಾಡ್ರಳ್ಳಿ,
ಮದುವೆ ಮಾರ್ನಳ್ಳಿ ಬೆಳೆಗಳ್ ಹಾರ್ನಳ್ಳಿ;
ನಮ್ ಶಾನ್ಬ್ಹೊಗಯ್ಯ, ಅಲ್ದೆ ಶೆಕ್ದಾರಪ್ಪ
ಇವ್ರೆಲ್ರು ಕಂಡವ್ರೆ ನನ್ನಾ. 

ಹೆಂಡರ್ನು ಮಕ್ಕಳ್ನು ಬಿಟ್ಟು, ಹಟ್ಟಿ ಅದನ್ನು ಬಿಟ್ಟು,
ಬಂದಿವ್ನಿ ನಾ, ನಿಮ್ಮುಂದೆ ನಿಂತಿವ್ನಿ ನಾ
ನಂಹಳ್ಳಿ ಕಿಲಾಡಿ ಹುಂಜಾ!

ನಾನು ಕೋಳಿಕೆ ರಂಗ
ಕೋನುಳಿನುಕೆನುನು ಸೊನ್ನೆ
ಕೋತ್ವ ಳಿ ಕಕೆತ್ವ ಮತ್ ಸೋನ್ನೆಯುನು
ಇದ್ನ ಹಾಡೋಕ್ ಬರ್ದೆ ಬಾಯ್ ಬಿಡೋವ್ನು ಹಃ ಹಃ ಹಃ
ಬೆಪ್ಪು ನನ್ ಮಗ

ಎತ್ತಿಲ್ಲದ್ ಬಂಡಿಗಳುವೆ ಎಣ್ಣೆಲ್ಲದ್ ದೀಪಗಳುವೆ,
ತುಂಬಿದ್ ಮೈಸೂರಿಗ್ ಬಂದೆ;
ದೊಡ್ಡ್ ಚೌಕದ ಮುಂದೆ, ದೊಡ್ಡ್ ಗಡಿಯಾರದ ಹಿಂದೆ
ಕಟ್ ತಂದಿದ್ ಬುತ್ತಿನ್ ತಿಂತಿದ್ದೆ.

ಅಲ್ ಕುದ್ರೆಮೇಲ್ ಕುಂತಿದ್ದೊಬ್ಬ್ ಸವಾರಯ್ಯ, ಕೆದ್ರಿದ್ ತನ್ ಮೀಸೆಮೇಲ್ ಹಾಕ್ದ ತನ್ ಕೈಯ್ಯ,
ಕೇಳ್ತಾನ್ ನನ್ನಾ ಗದ್ರುಸ್ತಾಲಿ ಬೆದ್ರುಸ್ತಾಲಿಲೇ, ಯಾರೋ ಯಾಕೋ ಇಲ್ಲಿಅಂತ!
ಹಃ ನಾನು..

ನಾನು ಕೋಳಿಕೆ ರಂಗ
ಕೋನುಳಿನುಕೆನುನು ಸೊನ್ನೆ
ಕಕೊತ್ವ ಳಿ ಕಕೆತ್ವ ಮತ್ ಸೋನ್ನೆಯುನು
ಇದ್ನ ಹಾಡೋಕ್ ಬರ್ದೆ ಬಾಯ್ ಬಿಡೋವ್ನು
ಬೆಪ್ ನನ್ ಮಗ

Friday, October 12, 2012

ನಾಕು ತಂತಿ

Haadu - Naaku Tanti
Rachane - Da Ra Bendre
Raaga Samyojane - Mysore Ananthaswamy
Haadiruvavaru - Mysore Ananthaswamy

 http://www.kannadaaudio.com/Songs/Bhaavageethe/Naakutanti-DaRa-Bendre/Naaku.ram

ಒಂದು

ಆವು ಈವಿನ ನಾವು ನೀವಿಗೆ
ಆನು ತಾನದ ತನನನಾS
ನಾನು ನೀನಿನ ಈ ನಿನಾನಿಗೆ
ಬೇನೆ ಏನೋ? ಜಾಣಿ ನಾS
ಚಾರು ತಂತ್ರಿಯ ಚರಣ ಚರಣದ
ಘನಘನಿತ ಚತು- -ರಸ್ವನಾ
ಹತವೊ ಹಿತವೋ ಆ ಅನಾಹತಾ
ಮಿತಿಮಿತಿಗೆ ಇತಿ ನನನನಾ
ಬೆನ್ನಿನಾನಿಕೆ ಜನನ ಜಾನಿಕೆ
ಮನನವೇ ಸಹಿ-ತಸ್ತನಾ.

ಎರಡು*

ಗೋವಿನ ಕೊಡುಗೆಯ ಹಡಗದ ಹುಡುಗಿ ಬೆಡಗಿಲೆ ಬಂದಳು ನಡುನಡುಗಿ;
ಸಲಿಗೆಯ ಸುಲಿಗೆಯ ಬಯಕೆಯ ಒಲುಮೆ ಬಯಲಿನ ನೆಯ್ಗೆಯ ಸಿರಿಯುಡುಗಿ;
ನಾಡಿಯ ನಡಿಗೆಯ ನಲುವಿನ ನಾಲಿಗೆ ನೆನೆದಿರೆ ಸೋಲುವ ಸೊಲ್ಲಿನಲಿ;
ಮುಟ್ಟದ ಮಾಟದ ಹುಟ್ಟದ ಹುಟ್ಟಿಗೆ ಜೇನಿನ ಥಳಿಮಳಿ ಸನಿಹ ಹನಿ;
ಬೆಚ್ಚಿದ ವೆಚ್ಚವು ಬಸರಿನ ಮೊಳಕೆ ಬಚ್ಚಿದ್ದಾವುದೋ ನಾ ತಿಳಿಯೆ.
ಭೂತದ ಭಾವ ಉದ್ಭವ ಜಾವ ಮೊಲೆ ಊಡಿಸುವಳು ಪ್ರತಿಭೆ ನವ.

ಮೂರು

'ಚಿತ್ತೀಮಳಿ, ತತ್ತೀ ಹಾಕತಿತ್ತು ಸ್ವಾತಿ ಮುತ್ತಿನೊಳಗ
ಸತ್ತಿSಯೊ ಮಗನS ಅಂತ ಕೂಗಿದರು
ಸಾವೀ ಮಗಳು, ಭಾವೀ ಮಗಳು ಕೂಡಿ'
'ಈ ಜಗ, ಅಪ್ಪಾ, ಅಮ್ಮನ ಮಗ ಅಮ್ಮನೊಳಗ ಅಪ್ಪನ ಮೊಗ
ಅಪ್ಪನ ಕತ್ತಿಗೆ ಅಮ್ಮನ ನೊಗ ನಾ ಅವರ ಕಂದ
ಶ್ರೀ ಗುರುದತ್ತ ಅಂದ.'
ನಾಕು

 
'ನಾನು' 'ನೀನು' 'ಆನು' 'ತಾನು' ನಾಕೆ ನಾಕು ತಂತಿ,
ಸೊಲ್ಲಿಸಿದರು ನಿಲ್ಲಿಸಿದರು ಓಂ ಓಂ ದಂತಿ!
ಗಣನಾಯಕ ಮೈ ಮಾಯಕ ಸೈ ಸಾಯಕ ಮಾಡಿ
ಗುರಿಯ ತುಂಬಿ ಕುರಿಯ ಕಣ್ಣು ಧಾತು ಮಾತು ಕೂಡಿ

ಮುಚ್ಚುಮರೆಯಿಲ್ಲದೆಯೆ

Raju Ananthaswamy avaru haadiruva, Kuvempu rachita, nanna nechchina geethe - MuchchuMare illadeye.

http://www.youtube.com/watch?v=RWi2ZcbCRxU
 
 
ಮುಚ್ಚುಮರೆಯಿಲ್ಲದೆಯೆ ನಿನ್ನ ಮುಂದೆಲ್ಲವನು
ಬಿಚ್ಚಿಡುವೆ ಓ ಗುರುವೇ ಅಂತರಾತ್ಮ
ಪಾಪವಿದೆ ಪುಣ್ಯವಿದೆ ನರಕವಿದೆ ನಾಕವಿದೆ
ಸ್ವೀಕರಿಸು ಓ ಗುರುವೇ ಅಂತರಾತ್ಮ ||

...
ರವಿಗೆ ಕಾಂತಿಯನೀವ ನಿನ್ನ ಕಣ್ಣೀಕ್ಷಿಸಲು
ಪಾಪ ತಾನುಳಿಯುವುದೇ ಪಾಪವಾಗಿ
ಗಂಗೆ ತಾನುದ್ಭವಿಪ ನಿನ್ನಡಿಯ ಸೋಂಕಿಗೆ
ನರಕ ತಾನುಳಿಯುವುದೇ ನರಕವಾಗಿ ||

ಶಾಂತ ರೀತಿಯಳಿಮ್ಮಿ ಕದಡಿರುವುದೆನ್ನಾತ್ಮ
ನಾಂತ ರೀತಿಯು ಅದೆಂತೋ ಓ ಅನಂತ
ನನ್ನ ನೀತಿಯ ಕುರುಡಿನೆಂದೆನ್ನ ರಕ್ಷಿಸೈ
ನಿನ್ನ ನೀತಿಯ ಬೆಳಕಿನ ಆನಂದಕೈ ||

ಬನ್ನಿ ಹರಸಿರಿ ತಂದೆಯೆ

In the honor of Sri Mysore Ananthaswamy & Sri Raju Ananthaswamy, lets hear 'Banni Harasiri Tandeye' in the voice of Raju Ananthaswamy .

http://www.youtube.com/watch?v=Yttf6AUctVw
 
 
ಬನ್ನಿ ಹರಸಿರಿ ತಂದೆಯೆ ಆಸೀನರಾಗಿರಿ ಮುಂದೆಯೆ
ನಿಮ್ಮ ಪ್ರೀತಿಗೆ ಹಾಡುವೆ ನಿಮ್ಮಾಶೀರ್ವಾದವ ಬೇಡುವೆ

ಮೈಯ್ಯ ಕೊಟ್ಟಿರಿ ಮಾಟ ಕೊಟ್ಟಿರಿ ತಿದ್ದಿದಿರಿ ಕಗ್ಗಲ್ಲನು
ನಿಮ್ಮ ಮೋಹಕ ಧನಿಯ ಕೊರಳಲಿ ಇಟ್ಟು ಕಾದಿರಿ ನನ್ನನು
...

ತಂದೆ ಮಾತ್ರವೆ ನೀವು ಗುರುವು ಸುಗಮ ಗೀತಾಚಾರ್ಯರು
ಕನ್ನಡದ ಕವಿತೆಯನು ಹಾಡುವಲೆಲ್ಲ ನೀವು ಅನಂತರು

ಅಳುವ ಕಡಲೊಳು ತೇಲಿ ಬರುತಲಿದೆ


Aluva kadalolu
Lyrics - Gopalakrishna Adiga
Music Director - Shimoga Subbanna
Singer - Shimoga Subbanna

...
 
 
ಅಳುವ ಕಡಲೊಳು ತೇಲಿ ಬರುತಲಿದೆ ನಗೆಯ ಹಾಯಿ ದೋಣಿ
ಬಾಳ ಗಂಗೆಯ ಮಹಾಪೂರದೊಳು ಸಾವಿನೊಂದು ವೇಣಿ
ನೆರೆತಿದೆ ಬೆರೆತಿದೆ ಕುಣಿವ ಮೊರೆವ ತೆರೆತೆರೆಗಳೋಣಿಯಲ್ಲಿ
ಜನನ ಮರಣಗಳ ಉಬ್ಬು ತಗ್ಗು ಹೊರಳುರುಳುವಾಟವಲ್ಲಿ

...
ಆಸೆ ಬೂದಿ ತಳದಲ್ಲು ಕೆರಳುತಿವೆ ಕಿಡಿಗಳೆನಿತೊ ಮರಳಿ
ಮುರಿದು ಬಿದ್ದ ಮನ ಮರದ ಕೊರಡೊಳು ಹೂವು ಹೂವು ಅರಳಿ
ಕೂಡಲಾರದೆದೆಯಾಳದಲ್ಲು ಕಂಡೀತು ಏಕ ಸೂತ್ರ
ಕಂಡುದುಂಟು ಬೆಸೆ ಬೆಸೆಗಳಲ್ಲು ಭಿನ್ನತೆಯ ವಿಕಟ ಹಾಸ್ಯ

ಎತ್ತರೆತ್ತರಕೆ ಏರುವಾ ಮನಕು ಕೆಸರ ಲೇಪ ಲೇಪ
ಹೊಳೆಯ ಕೊಳಚೆಯಲಿ ಮುಳುಗಿ ಕಂಡೆನೊ ಬಾನಿನೊಂದು ಪೆಂಪ
ತುಂಬುಗತ್ತಲಿನ ಬಸಿರನಾಳುತಿದೆ ಒಂದು ಅಗ್ನಿ ಪಿಂಡ
ತಮದಗಾಧ ಹೊನಲಲ್ಲು ಹೊಳೆಯುತಿದೆ ಸತ್ವವೊಂದಖಂಡ

ಇದನರಿತೆನೆಂದೆಯಾ? ಅರಿವು ಕಿರಣವನೇ ನುಂಗಿತೊಂದು ಮೇಘ
ಅ ಮುಗಿಲ ಬಸಿರನೆ ಬಗೆದು ಬಂತು ನವ ಕಿರಣ ಒಂದಮೋಘ
ಹಿಡಿದ ಹೊನ್ನೇ ಮಣ್ಣಹುದು ಮಣ್ಣೊಳು ಹೊಳೆದುದುಂಟು ಹೊನ್ನು
ಇದು ಹೀಗೆ ಎಂಬ ನಂಬುಗೆಯ ಊರುಗೋಲಿಲ್ಲ ಇನ್ನು ಮುನ್ನು

ಆಸೆ ಎಂಬ ತಳವೊಡೆದ ದೋಣಿಯಲಿ ದೂರ ತೀರ ಯಾನ
ಯಾರ ಲೀಲೆಗೋ ಯಾರೋ ಏನೋ ಗುರಿ ಇರದೆ ಬಿಟ್ಟ ಬಾಣ
ಇದು ಬಾಳು ನೋಡು ಇದು ತಿಳಿದೆನೆಂದರೂ ತಿಳಿದ ಧೀರನಿಲ್ಲ
ಹಲವುತನದ ಮೈ ಮರೆಸುವಾಟವಿದು ನಿಜವು ತೋರದಲ್ಲ

ಬೆಂಗಾಡು ನೋಡು ಇದು ಕಾಂಬ ಬಯಲು ದೊರಕಿಲ್ಲ ಆದಿ ಅಂತ್ಯ
ಅದ ತಿಳಿದೆನೆಂದ ಹಲರುಂಟು ತಣಿದೆ-ನೆಂದವರ ಕಾಣೆನಯ್ಯ
ಅರೆ ಬೆಳಕಿನಲ್ಲಿ ಬಾಳಲ್ಲಿ ಸುತ್ತಿ ನಾವೆಶ್ಟೋ ಮರೆತು ಮೆರೆದು
ಕೊನೆಗೆ ಕರಗುವೆವು ಮರಣ ತೀರ ಘನ ತಿಮಿರದಲ್ಲಿ ಬೆರೆತು

ಬಾ ಸವಿತಾ.... ಬಾ ಸವಿತಾ

Haadu - Baa Savitha
Rachane - Masti Venkatesha Iyengar
Singer - Jayashre K M

http://www.kannadaaudio.com/Songs/Bhaavageethe/BhaavaSangama/BaaSavithaBaaSavitha.ram
 
 
ಬಾ ಸವಿತಾ.... ಬಾ ಸವಿತಾ...

ಒಳಗಿನ ಕಣ್ಣನು ಮುಚ್ಚಿಸಿ ಒಮ್ಮೆ
ತಿಳಿವಿಗೆ ಬಣ್ಣವ ಹಚ್ಚಿಸಿ ಒಮ್ಮೆ
ಒಳಿತಲ್ಲದುದೇ ಒಳಿತೆಂಬುದರ ಚಳಕವೆಲ್ಲಕೆ
...
ವಿನಾಶವ ತಾ....

ನೆಲೆಯಿಂದ ಹೊರಟು ಅಲೆ ಅಲೆ.. ಅಲೆ ಅಲೆ..
ಛಲತೊಟ್ಟ ಮಲ್ಲವಾಹಿನಿ ಬಾ..
ನಿಲವಿಲ್ಲ ಜಗದಿ ಕತ್ತಲಿಗೆಂದು
ಗೆಲವನು ಸಾರುವ ಭಾಸವ ತಾ....

ಓಂ ತತ್ಸವಿತುರ್ವರೇಣ್ಯವೆ೦ಬೆವು
ಅಂತಲ್ಲದೆ ಬೇರೆಯದನು ನಂಬೆವು
ಪಂಥವ ಬೆಳಗಿಸಿ, ನಿರುಪಿಸಿ ಕಾಂಬೆವು
ಶಾಂತ ಸುಂದರ ಶಿವದಾಸವಿತಾ...

ಬಾರೊ ಸಾಧನಕೇರಿಗೆ

‎'Baaro Sadhanakerige' - another popular poem by Da Ra Bendre. SadhanaKeri is a little pond in Dharwad which is the inspiration for this poem. It is very well sung by M D Pallavi.

http://www.kannadaaudio.com/Songs/Bhaavageethe/ShravanadaSiriBaralide/Baaro.ram
 
 
ಬಾರೊ ಸಾಧನಕೇರಿಗೆ,
ಮರಳಿ ನಿನ್ನೀ ಊರಿಗೆ....

ಮಳೆಯು ಎಳೆಯುವ ತೇರಿಗೆ
ಹಸಿರು ಏರಿದೆ ಏರಿಗೆ
...
ಹಸಿರು ಸೇರಿದೆ ಊರಿಗೆ
ಹಸಿರು ಚಾಚಿದೆ ದಾರಿಗೆ
ನಂದನದ ತುಣುಕೊಂದು ಬಿದ್ದಿದೆ
ನೋಟ ಸೇರದು ಯಾರಿಗೆ?

ಮಲೆಯ ಮೊಗವೇ ಹೊರಳಿದೆ,
ಕೋಕಿಲಕೆ ಸವಿ ಕೊರಳಿದೆ,
ಬೇಲಿಗೂ ಹೂ ಬೆರಳಿದೆ,
ನೆಲಕೆ ಹರೆಯವು ಮರಳಿದೆ.
ಭೂಮಿತಾಯ್ ಒಡಮುರಿದು ಎದ್ದಳೊ,
ಶ್ರಾವಣದ ಸಿರಿ ಬರಲಿದೆ.

ಮೋಡಗಳ ನೆರಳಾಟವು,
ಅಡವಿ ಹೂಗಳ ಕೂಟವು,
ಕೋಟಿ ಜೆನ್ನೊಣಕೂಟವು,
ಯಕ್ಷಿ ಮಾಡಿದ ಮಾಟವು.
ನೋಡು ಬಾ ಗುಂಪಾಗಿ ಪಾತರ-
ಗಿತ್ತಿ ಕುಣಿಯುವ ತೋಟವು.

ಮರವು ಮುಗಿಲಿಗೆ ನೀಡಿದೆ.
ಗಿಡದ ಹೊದರೊಳು ಹಾಡಿದೆ
ಗಾಳಿ ಎಲ್ಲೂ ಆಡಿದೆ
ದುಗುಡ ಇಲ್ಲಿಂದೋಡಿದೆ
ಹೇಳು ಗೆಳೆಯಾ ಬೇರೆ ಎಲ್ಲೀ
ತರದ ನೋಟವ ನೋಡಿದೆ?

ಹಕ್ಕಿ ಹಾರುತಿದೆ ನೋಡಿದಿರಾ

Da Ra Bendre rachisida "hakki haarutide nodidira' in the melodious voice of Kasturi Shankar - http://www.kannadaaudio.com/Songs/Bhaavageethe/Naakutanti-DaRa-Bendre/Hakki.ram
 
 
ಇರುಳಿರುಳಳಿದು ದಿನ ದಿನ ಬೆಳಗೆ
ಸುತ್ತುಮುತ್ತಲೂ ಮೇಲಕೆ ಕೆಳಗೆ
ಗಾವುದ ಗಾವುದ ಗಾವುದ ಮುಂದೆ
ಎವೆತೆರೆದಿಕ್ಕುವ ಹೊತ್ತಿನ ಒಳಗೆ
ಹಕ್ಕಿ ಹಾರುತಿದೆ ನೋಡಿದಿರಾ? /೧/
...

ಕರಿನರೆ ಬಣ್ಣದ ಪುಚ್ಚಗಳುಂಟು
ಬಿಳಿ-ಹೊಳೆ ಬಣ್ಣದ ಗರಿ-ಗರಿಯುಂಟು
ಕೆನ್ನನ ಹೊನ್ನನ ಬಣ್ಣ-ಬಣ್ಣಗಳ
ರೆಕ್ಕೆಗಳೆರಡೂ ಪಕ್ಕದಲುಂಟು
ಹಕ್ಕಿ ಹಾರುತಿದೆ ನೋಡಿದಿರಾ? /೨/

ನೀಲಮೇಘಮಂಡಲ-ಸಮ ಬಣ್ಣ!
ಮುಗಿಲಿಗೆ ರೆಕ್ಕೆಗಳೊಡೆದವೊ ಅಣ್ಣಾ!
ಚಿಕ್ಕೆಯ ಮಾಲೆಯ ಸೆಕ್ಕಿಸಿಕೊಂಡು
ಸೂರ್ಯ-ಚಂದ್ರರನು ಮಾಡಿದೆ ಕಣ್ಣಾ
ಹಕ್ಕಿ ಹಾರುತಿದೆ ನೋಡಿದಿರಾ? /೩/

ರಾಜ್ಯದ ಸಾಮ್ರಾಜ್ಯದ ತೆನೆ ಒಕ್ಕಿ
ಮಂಡಲ-ಗಿಂಡಲಗಳ ಗಡ ಮುಕ್ಕಿ
ತೇಲಿಸಿ ಮುಳುಗಿಸಿ ಖಂಡ-ಖಂಡಗಳ
ಸಾರ್ವಭೌಮರಾ ನೆತ್ತಿಯ ಕುಕ್ಕಿ
ಹಕ್ಕಿ ಹಾರುತಿದೆ ನೋಡಿದಿರಾ? /೪/

ಯುಗ-ಯುಗಗಳ ಹಣೆ ಬರಹವ ಒರಸಿ
ಮನ್ವಂತರಗಳ ಭಾಗ್ಯವ ತೆರೆಸಿ
ರೆಕ್ಕೆಯ ಬೀಸುತ ಚೇತನಗೊಳಿಸಿ
ಹೊಸಗಾಲದ ಹಸುಮಕ್ಕಳ ಹರಸಿ
ಹಕ್ಕಿ ಹಾರುತಿದೆ ನೋಡಿದಿರಾ? /೫/

ಬೆಳ್ಳಿಯ ಹಳ್ಳಿಯ ಮೇರೆಯ ಮೀರಿ
ತಿಂಗಳಿನೂರಿನ ನೀರನು ಹೀರಿ
ಆಡಲು ಹಾಡಲು ತಾ ಹಾರಾಡಲು
ಮಂಗಳಲೋಕದ ಅಂಗಳಕೇರಿ
ಹಕ್ಕಿ ಹಾರುತಿದೆ ನೋಡಿದಿರಾ? /೬/

ಮುಟ್ಟಿದೆ ದಿಙ್ಮಂಡಲಗಳ ಅಂಚ
ಆಚೆಗೆ ಚಾಚಿದೆ ತನ್ನಯ ಚುಂಚ
ಬ್ರಹ್ಮಾಂಡಗಳನು ಒಡೆಯಲು ಎಂದೋ
ಬಲ್ಲರು ಯಾರಾ ಹಾಕಿದ ಹೊಂಚ
ಹಕ್ಕಿ ಹಾರುತಿದೆ ನೋಡಿದಿರಾ? /೭/

ಮೂಡುತ ರವಿ ರಂಗು ತಂದೈತೆ

Hope you will like this folk song "ಮೂಡುತ ರವಿ ರಂಗು ತಂದೈತೆ".

http://www.kannadaaudio.com/Songs/Folk/MoodutaRavi/MoodutaRavi.ram
 
 
ಮೂಡುತ ರವಿ ರಂಗು ತಂದೈತೆ,
ಓಡುತ ನದಿ ಹಾಡು ನೀಡೈತೆ,
ಬೆಟ್ಟದ ಮ್ಯಾಗೆ, ಕಟ್ಟೆಯ ಮ್ಯಾಗೆ,
ಗಾಳಿ ತೀಡೈತೆ.

...
ಬೆಳ್ಳಕ್ಕಿ ಸಾಲು ತೇಲಿ ತೇಲಿ ಪಲ್ಲಕ್ಕಿ ತೂಗೈತೆ
ಮಲ್ಲಿಗೆ ತೋಟ ಮಿಂಚಿ ಮಿಂಚಿ ಬೆಳ್ಳಗೆ ಹೊಳೆದೈತೆ
ಕಾಡಿನ ಜಾಡು ಕಂಪು ಇಂಪು
ಒಟ್ಟಿಗೆ ಕೂಡೈತೆ.

ಹಕ್ಕಿಯ ಮೇಳ ಕೂಗಿ ಕೂಗಿ ಹತ್ತಿರ ಕರೆದೈತೆ
ಕುಂಕುಮ ಧೂಳಿ ಮೇಲಕ್ಕೇರಿ ಸಿಂಧೂರ ಇಟ್ಟೈತೆ
ಕಣ್ಣಾರೆ ಕಂಡ ನೋಟದೂಟ
ಸಂತೋಷ ಸವಿದೈತೆ

ಸಂಜೆಯ ರಾಗಕೆ


Sanjeya Raagake Baanu kemperide
Rachane - Subbaraya Chakkodi
Haadiruvavaru - Narasimha Nayak

http://mio.to/9Mw4
 
ಸಂಜೆಯ ರಾಗಕೆ ಬಾನು ಕೆಂಪೇರಿದೆ
ತಿಂಗಳು ಮೂಡಿ ಬೆಳಕಿನ ಕೋಡಿ ಚೆಲ್ಲಾಡಿದೆ,
ಈಗ ರಂಗೇರಿದೆ ||

ಮರಗಿಡ ನೆಲದ ಮೇಲೆ ನೆರಳನು ಹಾಸಿದೆ
...
ಹೂಗಳ ದಳಗಳ ನಡುವೆ ನಿನ್ನದೇ ಬೆರಳಿದೆ ||

ಗಾಳಿಯ ಜೊತೆಯ ಗಂಧವು ನಿನ್ನನ್ನು ಸವರಿದೆ
ಒಳಗೂ ಹೊರಗೂ ವ್ಯಾಪಿಸಿ ಯೌವ್ವನ ಕೆರಳಿದೆ ||

ಕೊಳದಲಿ ಮೂಡಿದ ಬಿಂಬವು ಹೂಗಳ ಮರೆಸಿದೆ
ದಳದಲಿ ಎಂತಹ ಕನಸಿನ ಲೋಕವು ತೆರೆದಿದೆ

ಮುಗಿಲ ಮಾರಿಗೆ ರಾಗರತಿಯ


Rachane - Da Ra Bendre
Haadiruvavaru -
 
 
ಮುಗಿಲ ಮಾರಿಗೆ ರಾಗರತಿಯ ನಂಜ ಏರಿತ್ತ
ಆಗ ಸಂಜೆ ಆಗಿತ್ತ;
ನೆಲದ ಅಂಚಿಗೆ ಮಂಜಿನ ಮುಸುಕು ಹ್ಯಾಂಗೋ ಬಿದ್ದಿತ್ತ
ಗಾಳಿಗೆ ಮೇಲಕ್ಕೆದ್ದಿತ್ತ .

...
ಬಿದಿಗಿ ಚಂದ್ರನ ಚೊಗಚೀ-ನಗಿ-ಹೂ ಮೆಲ್ಲಗ ಮೂಡಿತ್ತ
ಮ್ಯಾಲಕ ಬೆಳ್ಳಿನ ಕೂಡಿತ್ತ;
ಇರುಳ ಹೆರಳಿನಾ ಅರಳಮಲ್ಲಿಗೀ ಜಾಳಿಗಿ ಹಾಂಗೆತ್ತ
ಸೂಸ್ಯಾವ ಚಿಕ್ಕಿ ಅತ್ತಿತ್ತ.

ಬೊಗಸಿಗಣ್ಣಿನಾ ಬಯಕೆಯ ಹೆಣ್ಣು ನೀರಿಗೆ ಹೋಗಿತ್ತ
ತಿರುಗಿ ಮನೀಗೆ ಸಾಗಿತ್ತ;
ಕಾಮಿ ಬೆಕ್ಕಿನ್ಹಾಂಗ ಭಾವೀ ಹಾದಿ ಕಾಲಾಗಸುಳಿತಿತ್ತ
ಎರಗಿ ಹಿಂದಕ್ಕುಳಿತಿತ್ತ.

ಮಳ್ಳಗಾಳಿ-ಸುಳಿ ಕಳ್ಳ ಕೈಲೆ ಸೆರಗನು ಹಿಡಿದಿತ್ತ
ಮತಮತ ಬೆರಗಿಲೆ ಬಿಡತಿತ್ತ;
ಒಂದ ಮನದ ಗಿಣಿ ಹಿಂದ ನೆಳ್ಳಿಗೆ ಬನ್ನಿಲೆ ಬರತಿತ್ತ
ತನ್ನ ಮೈಮರ ಮರತಿತ್ತ

ಗಮ ಗಮಾ ಗಮ್ಮಾಡಿಸ್ತಾವ ಮಲ್ಲಿಗಿ

Ghama Ghama Ghammadistava malligi
Rachane - Da Ra Bendre
Haadiruvavaru - Sangeetha Katti

http://www.youtube.com/watch?v=b6CoXR_nzgs
Sowmya Shree Sandeep, found a video of your singing in NEKK - loved your singing - http://www.youtube.com/watch?v=0h0P4v3jHF0
 
 
ಗಮ ಗಮಾ ಗಮ್ಮಾಡಿಸ್ತಾವ ಮಲ್ಲಿಗಿ |
ನೀ ಹೊರಟಿದ್ದೀಗ ಎಲ್ಲಿಗೀ ?

ತುಳುಕ್ಯಾಡತಾವ ತೂಕಡಿಕಿ
ಎವಿ ಅಪ್ಪತಾವ ಕಣ್ಣ ದುಡುಕಿ
...
ಕನಸು ತೇಲಿ ಬರತಾವ ಹುಡುಕಿ ||
ನೀ ಹೊರಟಿದ್ದೀಗ ಎಲ್ಲಿಗೀ ?

ಚಿಕ್ಕಿ ತೋರಿಸ್ತಾವ ಚಾಚಿ ಬೆರಳ
ಚಂದ್ರಮ ಕನ್ನಡಿ ಹರಳ
ಮನ ಸೋತು ಆಯಿತು ಮರುಳ ||
ನೀ ಹೊರಟಿದ್ದೀಗ ಎಲ್ಲಿಗೀ ?

ನೆರಳಲ್ಲಾಡತಾವ ಮರದ ಬುಡsಕ
ಕೆರಿ ತೆರಿ ನೂಗತಾವ ದಡಕs
ಹೀಂಗ ಬಿಟ್ಟು ಎಲ್ಲಿ ನನ್ನ ನಡsಕ
ನೀ ಹೊರಟಿದ್ದೀಗ ಎಲ್ಲಿಗೀ ?

ನನ್ನ ನಿನ್ನ ಒಂದತನದಾಗ
ಹಾಡು ಹುಟ್ಟಿ ಒಂದು ಮನದಾಗ
ಬೆಳದಿಂಗಳಾತು ಬನದಾಗ ||
ನೀ ಹೊರಟಿದ್ದೀಗ ಎಲ್ಲಿಗೀ ?

ಬಂತ್ಯಾಕ ನಿನಗ ಇಂದ ಮುನಿಸು
ಬೀಳಲಿಲ್ಲ ನನಗ ಇದರ ಕನಸು
ರಾಯ ತಿಳಿಯಲಿಲ್ಲ ನಿನ್ನ ಮನಸು ||
ನೀ ಹೊರಟಿದ್ದೀಗ ಎಲ್ಲಿಗೀ ?

ಗಜಮುಖನೆ ಗಣಪತಿಯೇ


Ganeshana habba without the song "Gajamukhane Ganapathiye" is like celebrating Ugadi habba without listening to "yuga yugadi kaledaroo". If you haven't listened to this yet today, here it is.....

Song - Gajamukhane Ganapathiye
Lyrics - Vijayanarasimha
Music - M Ranga Rao
...
 
 
ಶುಕ್ಲಾಂಬರಧರಂ ವಿಷ್ಣುಂ ಶಶಿವರ್ಣಂ ಚತುರ್ಭುಜಂ
ಪ್ರಸನ್ನ ವದನಂ ಧ್ಯಾಯೇತ್ ಸರ್ವ ವಿಘ್ನೋಪಶಾಂತಯೇತ್

ಗಜಮುಖನೆ ಗಣಪತಿಯೇ ನಿನಗೆ ವಂದನೆ
ನಂಬಿದವರ ಪಾಲಿನ ಕಲ್ಪತರು ನೀನೆ
...

ಭಾದ್ರಪದ ಶುಕ್ಲದಾ ಚೌತಿಯಂದು
ನೀ ಮನೆಮನೆಗೂ ದಯಮಾಡಿ ಹರಸು ಎಂದು
ನಿನ್ನ ಸನ್ನಿಧಾನದಿ ತಲೆಬಾಗಿ ಕೈಯ್ಯ ಮುಗಿದು
ಬೇಡುವಾ ಭಕ್ತರಿಗೆ ನೀ ದಯಾಸಿಂಧು

ಈರೇಳು ಲೋಕದ ಅಣುವಣುವಿನಾ
ಇಹಪರದಾ ಸಾಧನಕೆ ನೀ ಕಾರಣ
ನಿನ್ನೊಲುಮೆ ನೋಟದಾ ಒಂದು ಹೊನ್ನ ಕಿರಣಾ
ನೀಡಿದರೆ ಸಾಕಯ್ಯಾ ಜನ್ಮ ಪಾವನ

ಪಾರ್ವತಿ ಪರಶಿವನಾ ಪ್ರೇಮ ಪುತ್ರನೆ
ಪಾಲಿಸುವಾ ಪರದೈವಾ ಬೇರೆ ಕಾಣೆ
ಪಾಪದ ಪಂಕದಲಿ ಪದುಮ ಎನಿಸು ಎನ್ನ
ಪಾದ ಸೇವೆ ಒಂದೇ ಧರ್ಮ ಸಾಧನ

ಶರಣು ಶರಣಯ್ಯ ಶರಣು ಬೆನಕ


Gowri Ganesha habbada sambhrama - reminds me of the songs that blared from the temple next to our house in Bangalore.

Song - Sharanu Sharanayya sharanu benaka
Lyrics - Vijayanarasimha
Music - M Ranga Rao
...
 
 
ಶರಣು ಶರಣಯ್ಯ ಶರಣು ಬೆನಕ
ನೀಡಯ್ಯ ಬಾಳೆಲ್ಲ ಬೆಳಗುವ ಬೆಳಕ
ನಿನ್ನ ನಂಬಿದ ಜನಕೆ ಇಹುದಯ್ಯ ಎಲ್ಲ ಸುಖ
ತಂದೆ ಕಾಯೊ ನಮ್ಮ ಕರಿಮುಖ

...
ಎಲ್ಲಾರು ಒಂದಾಗಿ ನಿನ್ನ
ನಮಿಸಿ ನಲಿಯೋದು ನೋಡೋಕೆ ಚೆನ್ನ
ಗರಿಕೆ ತಂದರೆ ನೀನು ಕೊಡುವೆ ವರವನ್ನ
ಗತಿ ನೀನೆ ಗಣಪನೆ ಕೈ ಹಿಡಿಯೊ ಮುನ್ನ

ಸೂರ್ಯನೆದುರಲಿ ಮಂಜು ಕರಗುವ ರೀತಿ
ನಿನ್ನ ನೆನೆಯಲು ಒಡನೆ ಓಡುವುದು ಭೀತಿ
ನೀಡಯ್ಯ ಬಾಳೆಲ್ಲ ಬೆಳಗುವ ಶಕುತಿ
ತೋರಯ್ಯ ನಮ್ಮಲ್ಲಿ ನಿನ್ನಯ ಪ್ರೀತಿ

ಬೆನಕ ಬೆನಕ ಏಕದಂತ
ಪಚ್ಚೆಕಲ್ಲು ಪಾಣಿಮೆಟ್ಲು
ಒಪ್ಪುವ ವಿಘ್ನೇಶ್ವರ ನಿನಗೆ
ಇಪ್ಪತ್ತೊಂದು ನಮಸ್ಕಾರಗಳು

ಹತ್ತು ವರ್ಷದ ಹಿಂದೆ ಮುತ್ತೂರ ತೇರಿನಲಿ

Theme - Hendathi
Song - hattu varshada hinde
Lyrics - K S Narasimha Swamy
Singer - Medhini Dutt

http://www.kannadaaudio.com/Songs/Bhaavageethe/Navaoallava/Hattu.ram
 
 
ಹತ್ತು ವರ್ಷದ ಹಿಂದೆ ಮುತ್ತೂರ ತೇರಿನಲಿ
ಅತ್ತಿತ್ತ ಸುಳಿದವರು ನೀವಲ್ಲವೇ
ಹತ್ತಿರದ ಹೆಣ್ಣೆಂದು ಮತ್ತೆ ಮುತ್ತೂರಿನಲಿ
ಒಪ್ಪಿ ಕೈ ಹಿಡಿದವರು ನೀವಲ್ಲವೇ

...
ಬೆಟ್ಟಗಳಾ ಬೆನ್ನಿನಲಿ ಬೆಟ್ಟಗಳಾ ದಾರಿಯಲಿ
ಕಟ್ಟಿಕೊಂಡಲೆದವರು ನೀವಲ್ಲವೇ
ತಿಟ್ಟಿನಲ್ಲಿ ಮುಂದಾಗಿ ಕಣಿವೆಯಲಿ ಹಿಂದಾಗಿ
ನಗುನಗುತಾ ನಡೆದವರು ನೀವಲ್ಲವೇ

ಬಾಗಿಲಿಗೆ ಬಂದವರು ಬೇಗ ಬಾ ಎಂದವರು
ಬರಬೇಕೆ ಎಂದವರು ನೀವಲ್ಲವೇ
ನೋಡು ಬಾ ಎಂದವರು ಬೇಡ ಹೋಗೆಂದವರು
ಎಂದಿಗೂ ಬಿಡದವರು ನೀವಲ್ಲವೇ

ಸೆರಗೆಳೆದು ನಿಲ್ಲಿಸಿದವರು, ಜಡೆಯೆಳೆದು ನೋಯಿಸಿದವರು
ಎತ್ತರದ ಮನೆಯವರು ನೀವಲ್ಲವೇ
ನೀನೆ ಬೇಕೆಂದವರು, ನೀನೆ ಸಾಕೆಂದವರು
ಬೆಟ್ಟದಲಿ ನಿಂತವರು ನೀವಲ್ಲವೇ

ಕೈಗೆ ಬಳೆಯೇರದೇ ಅಯ್ಯೋ ನೋವೆಂದಾಗ
ಮಹಡಿಯಿಂದಿಳಿದವರು ನೀವಲ್ಲವೇ
ಬಳೆಗಾರ ಶೆಟ್ಟಿಯನು ಗದರಿಸಿಕೊಂಡವರು
ಬೆತ್ತವನು ತಂದವರು ನೀವಲ್ಲವೇ

ಹೊನ್ನು ಹೊಳೆ ನೀನೆಂದು, ಮುತ್ತು ಮಳೆ ನೀನೆಂದು
ಹಾಡಿ ಕುಣಿದವರು ನೀವಲ್ಲವೇ
ಮಲೆನಾಡ ಹೆಣ್ಣೆಂದು, ಒಲವಿತ್ತ ಹೆಣ್ಣೆಂದು
ಏನೇನೋ ಬರೆದವರು ನೀವಲ್ಲವೇ

ಚಂದಿರನ ಮಗಳೆಂದು ಚಂದ್ರಮುಖಿ ನೀನೆಂದು
ಹೊಸ ಹೆಸರನಿಟ್ಟವರು ನೀವಲ್ಲವೇ
ಮಲ್ಲಿಗೆಯ ದಂಡೆಯನು ತುರುಬಿಗೆ ಹಿಡಿದವರು
ತುಟಿಗೆ ತುಟಿ ತಂದವರು ನೀವಲ್ಲವೇ

ಬಡತನವೊ ಸಿರಿತನವೊ ಯಾರಿರಲಿ ಎಲ್ಲಿರಲಿ
ದೊರೆಯಾಗಿ ಮೆರೆವವರು ನೀವಲ್ಲವೇ
ಗಂಡನಿಗೆ ಒಪ್ಪಾಗಿ, ಕಂದನಿಗೆ ದಿಕ್ಕಾಗಿ
ಪಯಣದಲಿ ಜೊತೆಯಾಗಿ ನಾನಿಲ್ಲವೇ

ನಾನು ಬಡವಿ ಆತ ಬಡವ

Theme - Hendathi
Song - Naanu badavi aata badava
Lyrics - Da Ra Bendre

http://www.kannadaaudio.com/Songs/Bhaavageethe/Naakutanti-DaRa-Bendre/Naanu.ram
 
 
ನಾನು ಬಡವಿ ಆತ ಬಡವ
ಒಲವೆ ನಮ್ಮ ಬದುಕು
ಬಳಸಿಕೊಂಡೆವದನೆ ನಾವು
ಅದಕು ಇದಕು ಎದಕು

...
ಹತ್ತಿರಿರಲಿ ದೂರವಿರಲಿ
ಅವನೆ ರಂಗಸಾಲೆ
ಕಣ್ಣು ಕಟ್ಟುವಂಥ ಮೂರ್ತಿ
ಕಿವಿಗೆ ಮೆಚ್ಚಿನೋಲೆ

ಚಳಿಗೆ ಬಿಸಿಲಿಗೊಂದೆ ಹದ
ಅವನ ಮೈಯ ಮುಟ್ಟೆ
ಅದೇ ಗಳಿಗೆ ಮೈಯ ತುಂಬಾ
ನನಗೆ ನವಿರು ಬಟ್ಟೆ

ಆತ ಕೊಟ್ಟ ವಸ್ತು ಒಡವೆ
ನನಗೆ ಅವಗೆ ಗೊತ್ತು
ತೋಳುಗಳಿಗೆ ತೋಳಬಂದಿ
ಕೆನ್ನೆ ತುಂಬಾ ಮುತ್ತು

ಕುಂದು ಕೊರತೆ ತೋರಲಿಲ್ಲ
ಬೇಕು ಹೆಚ್ಚಿಗೇನು?
ಹೊಟ್ಟೆಗಿತ್ತ ಜೀವ ಫಲವ
ತುಟಿಗೆ ಹಾಲು ಜೇನು.

ನನ್ನವಳು ನನ್ನೆದೆಯ ಹೊನ್ನಾಡನಾಳುವಳು


A beautiful composition by K S Narasimhaswamy.
Theme - Hendathi
Song - Nannavalu Nannedeya
Lyrics - K S Narasimha Swamy
Album - Iruvanthige
...
 
 
ನನ್ನವಳು ನನ್ನೆದೆಯ ಹೊನ್ನಾಡನಾಳುವಳು
ಬೆಳಗುಗೆನ್ನೆಯ ಚೆನ್ನೆ ನನ್ನ ಮಡದಿ||ಪ||

ಹೊಳೆಯ ಸುಳಿಗಳಿಗಿಂತ ಆಳಗಣ್ಣಿನ ಚೆಲುವು
ಅವಳೊಮ್ಮೆ ಹೆರಳ ಕೆದರಿ ಕಪ್ಪುಗುರುಳನ್ನು
...
ಬೆನ್ನ ಮೇಲೆಲ್ಲ ಹರಡಿದರೆ…
ದೂರದಲಿ, ಗಿರಿಯ ಮೇಲೆ ಇಳಿದಂತೆ ಇರುಳ ಮಾಲೆ
ಇಳಿದಂತೆ ಇರುಳ ಮಾಲೆ.

ಕರೆದಾಗ ತೌರು ಮನೆ, ನೆನೆದಾಗ ನನ್ನ ಮನೆ
ಹಳ್ಳಿಯೆರಡರ ಮುದ್ದು ಬಳ್ಳಿ ಅವಳು
ಮುಚ್ಚು ಮರೆ ಇಲ್ಲದೆ ಅಚ್ಚ ಮಲ್ಲಿಗೆಯಂತೆ
ಅರಳುತಿಹುದು ಅವಳ ಬದುಕು
ಬಂಗಾರದೊಡವೆಗಳ ಬಯಸಿಲ್ಲ ಮನಸಿನಲಿ
ಬಂಗಾರದಂತ ಹುಡುಗಿ
ನನ್ನೊಡವೆ, ನನ್ನ ಬೆಡಗಿ.

ಹಸಿರು ಸೀರೆಯನುಟ್ಟು, ಕೆಂಪು ಬಳೆಗಳ ತೊಟ್ಟು
ತುಂಬು ದನಿಯಲಿ ಕರೆವಳೆನ್ನ ಚೆಲುವೆ
ಹಣೆಯನಾಳುವುದು ಅವಳ ಕುಂಕುಮದ ನಿಡುವಟ್ಟು
ಲಕ್ಷ್ಮಿ ಅವಳೆನ್ನ ಮನೆಗೆ
ನಮಗಿದುವೇ ಸೊಗಸು ಬದುಕಿನ ಬಣ್ಣಗಳಾ ಸಂತೆ
ನಮಗಿಲ್ಲ ನೂರು ಚಿಂತೆ,ನಾವು ಗಂಧರ್ವರಂತೆ
ನಾವು ಗಂಧರ್ವರಂತೆ.